“ಆರ್.ಎಸ್.ಎಸ್ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ದೊಡ್ಡ ಶತ್ರು” ➤ ಸಿ.ಎಫ್.ಐ ಯ ‘ಸಂಚುಗಾರ ಸಂಘಪರಿವಾರ’ ಪುಸ್ತಕ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್

(ನ್ಯೂಸ್ ಕಡಬ) newskadaba.com ಮಂಗಳೂರು, ನ. 28. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ “ಸಂಚುಗಾರ ಸಂಘ ಪರಿವಾರ” ಪುಸ್ತಕದ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮವು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ರಾಜ್ಯಸಭಾ ಸದಸ್ಯ, ವಿದಾನ ಪರಿಷತ್ ಶಾಸಕ ಬಿ. ಕೆ ಹರಿಪ್ರಸಾದ್ ಮಾತನಾಡಿ, ‘ಆರ್.ಎಸ್.ಎಸ್ ಹಾಗೂ ಸಂಘಪರಿವಾರ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ದೊಡ್ಡ ಶತ್ರು ಇದರ ವಿರುದ್ಧ ಎಲ್ಲರೂ ಒಂದಾಗಿ ಈ ದೇಶವನ್ನು ಉಳಿಸಬೇಕಾಗಿದೆ ಎಂದರು’. ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ, ‘ಸಂಘ ಪರಿವಾರವನ್ನು ವಿರೋಧಿಸುವ ಧ್ವನಿಗಳು ಒಂದಾಗಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ‌. ಭಾರತವನ್ನು ಉಳಿಸಬೇಕೆಂಬ ಉದ್ದೇಶವಿರುವವರು ಫ್ಯಾಸಿಸಂ ವಿರುಧ್ದದ ತಂತ್ರಗಾರಿಕೆಯನ್ನು ಮಾಡಬೇಕಾಗಿದೆ. ಪ್ರಸ್ತುತ ಈ ದೇಶವನ್ನು ಸರಿಯಾಗಿ ತಿಳಿದುಕೊಂಡಂತಹ, ಧೈರ್ಯವಂತ ಮತ್ತು ನೈತಿಕತೆ ಇರುವ ನಾಯಕತ್ವದ ಅಗತ್ಯತೆಯಿದೆ, ಆ ನಾಯಕತ್ವದ ಮೂಲಕ ಹೊಸ ಬದಲಾವಣೆಯನ್ನು ನಾವು ಕಾಣಬೇಕಿದೆ ಎಂದು ಹೇಳಿದರು.

Also Read  ಕ್ವಾರಂಟೈನ್ ನಲ್ಲಿದ್ದರೂ ಕಡಬಕ್ಕೆ ಬಂದು ಕೆಲಸಕ್ಕೆ ಹಾಜರಾದ ಮ್ಯಾನೇಜರ್ ➤ ಮ್ಯಾನೇಜರ್ ಗೆ 14 ದಿನ ಕಛೇರಿಯಲ್ಲೇ ಕ್ವಾರಂಟೈನ್, ಸಿಬ್ಬಂದಿಗಳಿಗೆ 14 ದಿನ ರಜೆ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ| ಪಟ್ಟಾಭಿರಾಮ ಸೋಮಯಾಜಿ ಹಾಗೂ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಇರ್ಷಾದ್ ಕಾವು ಕಾರ್ಯಕ್ರಮದಲ್ಲಿ ಮಾತನಾಡಿದರು. ವುಮೆನ್ ಇಂಡಿಯಾ ಮೂವ್ ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ಸಿ.ಎಫ್.ಐ ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿ ಜೆ ಸ್ವಾಗತಿಸಿ, ಸಮಿತಿ ಸದಸ್ಯ ರಿಯಾಝ್ ಕಡಂಬು ನಿರೂಪಿಸಿದರು.

Also Read  ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾದ ಕಡಬದ ಮತ್ತೋರ್ವ ಯುವತಿ ➤ 85ನೇ ರ‍್ಯಾಂಕ್ ಪಡೆದ ಕಡಬದ ವರ್ಷಿತಾ ಪಿ.ಕೆ.

error: Content is protected !!
Scroll to Top