‘ಉಗ್ರ ಸಂಘಟನೆ ಲಷ್ಕರ್’ ಪರ ಬರಹ ➤ ಮಂಗಳೂರು ನಗರದಲ್ಲಿ ವಿ.ಹಿಂ.ಪ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು . 27: ನಿಷೇಧಿತ ಉಗ್ರ ಸಂಘಟನೆ ಪರ ನಗರದ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಜೈಕಾರ ಹಾಗೂ ಸಂಘಪರಿವಾರಕ್ಕೆ ಎಚ್ಚರಿಕೆಯ ನೀಡಿದ ಗೋಡೆ ಬರಹದ ವಿರುದ್ಧ ವಿಶ್ವ ಹಿಂದೂ ಪರಿಷತ್ ನಗರದ ಮಲ್ಲಿಕಟ್ಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಿತು.

50 ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ದೇಶ ವಿರೋಧಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.‌ ಈ ಸಂದರ್ಭ ವಿಹಿಂಪ ಮುಖಂಡ ಗೋಪಾಲ್ ಕುತ್ತಾರ್ ಮಾತನಾಡಿ, ಆರೋಪಿಗಳನ್ನ ಶೀಘ್ರವೇ ಬಂಧಿಸಿ, ಈ ದುಷ್ಕೃತ್ಯದ ಹಿಂದೆ ಇರೋ ಸಂಘಟನೆ ಹಾಗೂ ಮಾನಸಿಕತೆ ಯಾವುದು ಅನ್ನೋದು ಬಯಲಾಗಬೇಕು. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೇ ಹೋದಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲೂ ವಿಶ್ವ ಹಿಂದೂ ಪರಿಷತ್ ತೀವ್ರ ಪ್ರತಿಭಟನೆ ನಡೆಸಲಿದೆ ಎಂದರು.

Also Read  ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನ ಹೊತ್ತೊಯ್ದ ಚಿರತೆ..!

 

 

error: Content is protected !!
Scroll to Top