(ನ್ಯೂಸ್ ಕಡಬ) newskadaba.com ಕಡಬ, ನ.25. ಕಳೆದ ಒಂದೂವರೆ ವರ್ಷದಿಂದ ಕಡಬದಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಅವಿನ್ ರಂಗತ್ತಮಲೆಯವರನ್ನು ದಿಢೀರ್ ವರ್ಗಾವಣೆಗೊಳಿಸಿರುವ ರಾಜ್ಯ ಸರಕಾರವು ನೂತನ ಕಂದಾಯ ನಿರೀಕ್ಷಕರನ್ನಾಗಿ ಗೋಪಾಲ ಕೆ.ಯವರನ್ನು ನೇಮಿಸಿ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಕಡಬ ನಿವಾಸಿ ಗೋಪಾಲ ಕೆ.ಯವರನ್ನು ವರ್ಗಾಯಿಸಿ ಸರ್ಕಾರದ ಅಧೀನ ಕಾರ್ಯದರ್ಶಿಯವರು ಆದೇಶಿಸಿದ್ದಾರೆ. ವರ್ಗಾಯಿತ ಕಂದಾಯ ನಿರೀಕ್ಷಕರಿಗೆ ಯಾವುದೇ ಸ್ಥಳವನ್ನು ಆದೇಶ ಪ್ರತಿಯಲ್ಲಿ ಸೂಚಿಸಿಲ್ಲ.
Also Read ಕಡಬ ಪಿಲ್ಯ ಫ್ಯಾಷನ್ ಇನ್‌ಸ್ಟಾಗ್ರಾಂ GIVEAWAY ಕಾರ್ಯಕ್ರಮ - ಸ್ಮಾರ್ಟ್ ಫೋನ್ ಗೆದ್ದ 10 ನೇ ತರಗತಿಯ ಬಾಲಕ