(ನ್ಯೂಸ್ ಕಡಬ) newskadaba.com ಮಂಗಳೂರು ನ. 24: ಕೊರೊನಾ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವಾಗ ಖಾಸಗಿ ಆಸ್ಪತ್ರೆಗಳು ಒಂದಲ್ಲ ಒಂದು ರೀತಿಯಲ್ಲಿ ಹಣ ಮಾಡುವ ದಂಧೆ ನಡೆಯುತ್ತಲೇ ಇದೆ. ಇದೀಗ ಮಂಗಳೂರಿನಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಡ ರೋಗಿಯನ್ನು ಸೂಕ್ತ ಚಿಕಿತ್ಸೆ ನೀಡುವುದು ಬಿಟ್ಟು, ಲಕ್ಷಾಂತರ ರೂಪಾಯಿ ಬಿಲ್ ಮಾಡಿರುವ ಘಟನೆ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಪ್ರಧಾನಿ ಕಾರ್ಯಾಲಯ ಆಸ್ಪತ್ರೆಗೆ 12,96,320 ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.
ಪಣಂಬೂರು ವ್ಯಕ್ತಿಯೊಬ್ಬರು ಫೆಬ್ರವರಿ ತಿಂಗಳಿನಲ್ಲಿ ಅಪಘಾತಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೇ ಆಯುಷ್ಮಾನ್ ಯೋಜನೆಯಡಿ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಬೇಕಾಗಿತ್ತು. ರೋಗಿಯನ್ನು ಚಿಕಿತ್ಸೆಗೆ ನಿರಾಕರಿಸಿದ ಬಗ್ಗೆ ಕಾಟಿಪಳ್ಳದ ಅಭ್ಯುದಯ ಭಾರತೀ ಸೇವಾ ಟ್ರಸ್ಟ್ ಆಸ್ಪತ್ರೆಯ ವಿರುದ್ಧ ಪ್ರಧಾನಿ ಕಾರ್ಯಲಯಕ್ಕೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಪ್ರಧಾನಿ ಕಾರ್ಯಾಲಯವು ಒಟ್ಟು 12,96,320 ರೂಪಾಯಿ ದಂಡ ವಿಧಿಸಿದಲ್ಲದೇ ರೋಗಿಗಳು ಪಾವತಿಸಿರುವ ಹಣವನ್ನು ಕೂಡಾ ಅವರಿಗೆ ಹಿಂತಿರುಗಿಸುವಂತೆ ಸೂಚಿಸಿದ್ದಾರೆ.