ಸವಣೂರು: ಗ್ರಾ.ಪಂ.ನಿಂದ ಪರಿಸರದ ಶಾಲೆಗಳಿಗೆ ಕಸದ ತೊಟ್ಟಿ ವಿತರಣೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.06. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಚ್ಚ ಪರಿಸರ ಯೋಜನೆ ಸಲುವಾಗಿ ಸವಣೂರು ಗ್ರಾ.ಪಂ ವತಿಯಿಂದ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಕಸದ ತೊಟ್ಟಿ ವಿತರಿಸಲಾಯಿತು.

ಗ್ರಾ.ಪಂ.ವ್ಯಾಪ್ತಿಯ ಶಾಲೆಗಳಾದ ಸವಣೂರು ಹಿ.ಪ್ರಾ.ಶಾಲೆ ,ಪ್ರೌಢಶಾಲೆ,ಪ.ಪೂ.ಕಾಲೇಜು, ಮೊಗರು ಹಿ.ಪ್ರಾ.ಶಾಲೆ, ಆರೆಲ್ತಡಿ ಕಿ.ಪ್ರಾ.ಶಾಲೆ, ಪುಣ್ಚಪ್ಪಾಡಿ ಹಿ.ಪ್ರಾ.ಶಾಲೆ, ಕುಮಾರಮಂಗಲ ಹಿ.ಪ್ರಾ.ಶಾಲೆ, ಮಂಜುನಾಥನಗರ ಹಿ.ಪ್ರಾ.ಶಾಲೆ, ಮಂಜುನಾಥನಗರ ಪ್ರೌಢಶಾಲೆ, ಅಂಕತ್ತಡ್ಕ ಹಿ.ಪ್ರಾ.ಶಾಲೆ, ಚೆನ್ನಾವರ ಕಿ.ಪ್ರಾ.ಶಾಲೆ, ಪಾಲ್ತಾಡಿ ಹಿ.ಪ್ರಾ.ಶಾಲೆಗಳಿಗೆ ಕಸದ ತೊಟ್ಟಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ಗಿರಿಶಂಕರ್ ಸುಲಾಯ, ಸತೀಶ್ ಬಲ್ಯಾಯ, ಪ್ರಕಾಶ್ ಕುದ್ಮನಮಜಲು, ವೇದಾವತಿ ಅಂಜಯ, ಎಂ.ಎ.ರಫೀಕ್, ಸತೀಶ್ ಅಂಗಡಿಮೂಲೆ, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸುಭಾಶ್ಚಂದ್ರ ಮಲ್ಲಣ್ಣನವರ್, ಲೆಕ್ಕ ಸಹಾಯಕ ಎ.ಮನ್ಮಥ , ಪ್ರಮೋದ್ ಕುಮಾರ್ ರೈ , ದಯಾನಂದ ಮಾಲೆತ್ತಾರು ಮೊದಲಾದವರಿದ್ದರು.

Also Read  ಹೆಚ್1 ಎನ್1 ಸೋಂಕಿನ ಲಕ್ಷಣ

error: Content is protected !!
Scroll to Top