ಕಡಬ ತಾಲೂಕು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತರ ಸಮಾವೇಶ

(ನ್ಯೂಸ್ ಕಡಬ) newskadaba.com ಕಡಬ, ನ. 22. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಕಾರ್ಯಕರ್ತರ ಸಮಾವೇಶವು ಇಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಸ್ಲಿಂ ಲೀಗ್ ಜಿಲ್ಲಾದ್ಯಕ್ಷರಾದ ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ರವರು ಮುಸ್ಲಿಂ ಲೀಗ್ ಪಕ್ಷವು ಸ್ವಾತಂತ್ರ್ಯ ಪೂರ್ವದಿಂದ ಇಡೀ ಭಾರತದಲ್ಲಿ ಸೇವೆಯನ್ನು ಮಾಡುತ್ತಾ ಬಂದಿದೆ. ಸಮಾಜದಲ್ಲಿ ಅಶಕ್ತರ ಆಶಾಕಿರಣವಾಗಿ ಮತ್ತು ಸಮಾಜದ ದ್ವನಿಯಾಗಿ ಮುನ್ನುಗ್ಗುತ್ತಿದೆ ಎಂದರು. ತದನಂತರ ಮುಸ್ಲಿಂ ಯೂತ್ ಲೀಗ್ ಜಿಲ್ಲಾದ್ಯಕ್ಷರಾದ ಅಪ್ಹಾಂ ತಂಙಳ್ ರವರು ಮಾತನಾಡಿ ಮುಸ್ಲಿಂ ಸಮುದಾಯದ ದ್ವನಿಯಾಗಿದೆ ಮುಸ್ಲಿಂ ಲೀಗ್, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವ ಏಕೈಕ ಪಕ್ಷವಾಗಿದೆ ಮುಸ್ಲಿಂ ಲೀಗ್ ಎಂದರು. ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿಯಾದ ಕತ್ತಾರ್ ಇಬ್ರಾಹಿಂ ಹಾಜಿ ಮಾತನಾಡಿ ಸಮಾಜಕ್ಕೆ ಮುಸ್ಲಿಂ ಲೀಗ್ ನೀಡಿದ ಕೊಡುಗೆ ಹೇಳತೀರದು, ಲೀಗ್ ನ ಸಹ ಸಂಘಟನೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದೆ ಎಂದರು. ನಂತರ ಜಿಲ್ಲಾ ಯೂತ್ ಲೀಗ್ ಉಪಾಧ್ಯಕ್ಷರಾದ ಶಬೀರ್ ಅಝ್ಹ್ ಹರಿ ಪಾಂಡವರಕಲ್ಲು, ಕರೀಂ ಬದ್ರಿಯ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಮ್ಸುದ್ದೀನ್ ಹುದವಿ ಸ್ವಾಗತ ಮಾಡಿ, ವೇದಿಕೆಯಲ್ಲಿ ಸಿದ್ದೀಕ್ ಕಡಬ ಉಪಸ್ಥಿತರಿದ್ದರು, ‌ಕೊನೆಯಲ್ಲಿ ತಾತ್ಕಾಲಿಕ ಕಮಿಟಿ ರಚನೆ ಮಾಡಲಾಯಿತು.‌ ಕಮಿಟಿಯ ಚೆಯರ್ಮಾನ್ ಆಗಿ ರಝಾಕ್ ರಾವೂತ್ತಾರ್ , ವೈಸ್ ಚೆಯರ್ಮಾನ್ ಆಗಿ ಮುತ್ತಲಿಬ್ ಕುಂತೂರು , ಮುಸ್ತಫ ವಕೀಲರು ಕೊರುಂದೂರು, ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಸಿದ್ದೀಕ್ ಕಡಬ, ಶಮ್ಸುದ್ದೀನ್ ಹುದವಿ, ಅಶ್ರಫ್ ಕುಂತೂರು, ಫೈಝಲ್ ಕೆ.ಪಿ, ಅಬ್ದುಲ್ ಲತೀಫ್ ಮುಸ್ಲಿಯಾರ್, ಪಯಾಝ್ ಕುಂತೂರು, ರಝಾಕ್ ಝಿಂದಗಿ, ಶಾಫಿ ಪನ್ಯ ಹಾಗೂ ಕನ್ವಿನರ್ ಆಗಿ ಕರೀಂ ಬದ್ರಿಯ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಮುಂದಿನ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಚುನಾವಣೆ ಸೂಕ್ತ ರೀತಿಯಲ್ಲಿ ಎದುರಿಸುವುದು ಮತ್ತು ಪ್ರಚಾರ ‌ಕುರಿತು ಚರ್ಚಿಸಲಾಯಿತು.

Also Read  ಶಾಲಾ ಬಾಲಕ ನಾಪತ್ತೆ ! ➤ ದೂರು ದಾಖಲು

error: Content is protected !!
Scroll to Top