ಕಡಬ: ನಿವೃತ್ತ ಯೋಧ ಸಂತೋಷ್ ಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ನ. 22. ಸುದೀರ್ಘ 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ, ನಂತರ ಜಮ್ಮು ಕಾಶ್ಮೀರದಿಂದ ಸೇವಾ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಸಂತೋಷ್ ತೋಮಸ್ ಅವರಿಗೆ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಕೋಡಿಂಬಾಳ ಇದರ ವತಿಯಿಂದ ಅಭಿನಂದನಾ ಕಾರ್ಯಕ್ರಮ ಇಂದು ದಿವ್ಯ ಬಲಿಪೂಜೆಯ ನಂತರ ಕೋಡಿಂಬಾಳ ಚರ್ಚ್‌ ನಲ್ಲಿ ನಡೆಯಿತು.

 

ಕೋಡಿಂಬಾಳ ಸಂತ ಜಾರ್ಜ್ ಚರ್ಚ್ ಧರ್ಮಗುರುಗಳಾದ ವಂದನೀಯ ರೆವರೆಂಡ್ ಫಾದರ್ ದಾನಿಯೇಲ್ ಕಡಂಕಂಪಳ್ಳಿ ರವರು ಸಂತೋಷ್ ತೋಮಸ್ ಅವರಿಗೆ ಹಾಗೂ ಅವರ ಕುಟುಂಬಕ್ಕಾಗಿ ಬಲಿಪೂಜೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂತೋಷ್ ತೋಮಸ್ ಅವರಿಗೆ ಶಾಲು ಹೊದಿಸಿ, ಪೇಟ ಮತ್ತು ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಚರ್ಚ್ ಆಡಳಿತ ಟ್ರಸ್ಟಿ ಜೋಸ್ ತೆಕ್ಕೇಪೂಕಲಂ, ಕಾರ್ಯದರ್ಶಿ ಸನೀಶ್ ಬಿ.ಟಿ, ಆಡಳಿತ ಕಮಿಟಿ ಪದಾಧಿಕಾರಿಗಳು, ಧರ್ಮಭಗಿನಿಯರು, ಸಭಾ ವಿಶ್ವಾಸಿಗಳು ಉಪಸ್ಥಿತರಿದ್ದರು.

Also Read  ಉಳ್ಳಾಲ: ಸಿಎಂ ಭೇಟಿ ಹಿನ್ನೆಲೆ ➤ ಸಂಚಾರಿ ಪೇದೆ ಗಂಭೀರ

 

error: Content is protected !!
Scroll to Top