ಉಡುಪಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕೊವೀಡ್ ಟೆಸ್ಟ್ ➤ ಏಳು ಸ್ಟೂಡೆಂಟ್ಸ್ ಗಳಲ್ಲಿ ಕೊವೀಡ್ ಪಾಸಿಟಿವ್

(ನ್ಯೂಸ್ ಕಡಬ) newskadaba.com ಉಡುಪಿ, ನ. 21: ಕಾಲೇಜು ಪ್ರಾರಂಭವಾಗುತ್ತಲೇ ಏಳು ಮಂದಿ ಪದವಿ ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ‌ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.ಈ ಪೈಕಿ 7 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಗೊಂಡಿದೆ. ಪದವಿ ಕಾಲೇಜು ಆರಂಭದ ಹಿನ್ನಲೆಯಲ್ಲಿ ಈ ಟೆಸ್ಟ್ ನಡೆಯುತ್ತಿದೆ.

 

ಮಣಿಪಾಲದ 5 ಹಾಗೂ ಕಾರ್ಕಳ ತಾಲೂಕಿನ 2 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ದೃಢಗೊಂಡಿದ್ದು, ಸೋಂಕಿತ‌ ವಿದ್ಯಾರ್ಥಿಗಳಿಗೆ ಹೋಂ‌ ಐಸೋಲೇಶನ್‌ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 6 ಸಾವಿರ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ನ. 17 ರಿಂದ ಪದವಿ ತರಗತಿ ಆರಂಭಗೊಂಡಿದ್ದವು.

Also Read  ಕೋವಿಡ್ ಹೆಚ್ಚಳ ಆತಂಕ ➤ ಮಾಸ್ಕ್ ಧರಿಸುವಂತೆ ಪ್ರಯಾಣಿಕರಿಗೆ BMTC ಸೂಚನೆ

 

Xl

error: Content is protected !!
Scroll to Top