ಉಪ್ಪಿನಂಗಡಿ: ಸಾವಿರಾರು ರೂಪಾಯಿ ಪಡೆದು ವಂಚಿಸಿದ ನಕಲಿ ಜ್ಯೋತಿಷಿ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ . 20: ಮಂಡ್ಯದ ವ್ಯಕ್ತಿಯೋರ್ವ ಜ್ಯೋತಿಷಿಯಂತೆ ನಟಿಸಿ ಹಲವಾರು ಮಂದಿಯಿಂದ ಸಾವಿರಾರು ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

 

 

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದೆ. ವಂಚನೆ ಮಾಡಿರುವ ಬಗ್ಗೆ ಜನರಿಗೆ ತಿಳಿದ ಬಳಿಕ ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ಹಣ ಮರುಪಾವತಿಯನ್ನು ಜ್ಯೋತಿಷಿ ಗೂಗಲ್ ಪೇ ಮೂಲಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮಹಿಳೆಯೋರ್ವರು ಮನೆಯಿಂದ ಚಿನ್ನಾಭರಣ ಅಡವಿಟ್ಟು ಜ್ಯೋತಿಷಿಗೆ ಹಣ ನೀಡಿರುವುದಾಗಿ ಹೇಳುತ್ತಿದ್ದಾರೆ. ನಕಲಿ ಜ್ಯೋತಿಷಿಯ ವಿರುದ್ಧ ಪೊಲೀಸ್ ಮೂಲಗಳ ಪ್ರಕಾರ ದೂರು ದಾಖಲಿಸಿಲ್ಲ ಎನ್ನಲಾಗಿದೆ.

Also Read  ಉಡುಪಿ: ಬಾರ್ಕೂರಿನ ರಿಶಾ ತಾನ್ಯಾ ಪಿಂಟೋರವರಿಗೆ "ಮಿಸ್ ಟೀನ್ ಕರಾವಳಿ 2024" ಕಿರೀಟ

 

Xl

 

error: Content is protected !!
Scroll to Top