ಏನೆಕಲ್ಲು: ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪಂಜ, . 19. ಇಂದು ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏನೆಕಲ್ಲಿನ ಬಾಲಾಡಿ ಎಂಬಲ್ಲಿ ನಡೆದಿದೆ.

 

 

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಏನೆಕಲ್ಲು ಗ್ರಾಮದ ಬಾಲಾಡಿಯ ಶಿಲ್ಪಿ ಧನಂಜಯ ಆಚಾರ್ಯರವರ ಪುತ್ರ ತವಿನ್ ಆಚಾರ್ಯ(24) ಎಂದು ಗುರುತಿಸಲಾಗಿದೆ. ಈತ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಆತ್ಮಹತ್ಯೆಗೆ ಕಾರಣ ಏನು ಎಂಬುದಾಗಿ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ, ಚಿಕ್ಕಮ್ಮ, ಸಹೋದರಿಯರನ್ನು ಅಗಲಿದ್ದಾರೆ.

 

Scroll to Top