ಕುಲ್ಕುಂದ: ದೀಪಾವಳಿ ಪ್ರಯುಕ್ತ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಂಬಿಲ

(ನ್ಯೂಸ್ ಕಡಬ) newskadaba.com ಕುಲ್ಕುಂದ, ನ. 18:  ಕಳೆದ ದಿನ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೀಪಾವಳಿ ತಂಬಿಲ ಕಾರ್ಯಕ್ರಮ ನಡೆಯಿತು. ವಿವಿಧ ವೈದಿಕ ವಿದಿ ವಿಧಾನಗಳನ್ನು ಪುರೋಹಿರ ರಘುರಾಮ ಅಮ್ಮಣ್ಣಾಯವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

 

 

ಬಳಿಕ ಗುಳಿಗನ ಕಟ್ಟೆಯಲ್ಲಿ ತಂಬಿಲ ಮತ್ತು ಪೂಜೆ ನೆರವೇರಿಸಿದರು. ನಂತರ ಬಲೀಂದ್ರ ಕಂಬಕ್ಕೆ ಪೂಜೆ ಮಾಡಿ, ಪ್ರಸಾದ ವಿತರಿಸಿದರು. ಕಾರ್ಯಕ್ರಮದಲ್ಲಿ ದೈವಸ್ಥಾನದ ಅರ್ಚಕ ರಾಮಚಂದ್ರ ಮಣಿಯಾಣಿ, ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಭಟ್, ನಿಯೋಜಿತ ಅಧ್ಯಕ್ಷ ಅವೀಂದ್ರ ಕುಮಾರ್ ರುದ್ರಪಾದ, ಸಂಚಾಲಕ ಎ. ವೆಂಕಟ್ರಾಜ್, ಕುಲ್ಕುಂದ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ, ಪ್ರಮುಖರಾದ ಸುಬ್ರಹ್ಮಣ್ಯ ಕಾಮತ್, ನಾಗೇಶ್ ಕೈಕಂಬ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

Also Read  ಪಂಜ: ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪದ್ಮನಾಭ ರೈ ಆಯ್ಕೆ

 

Xl

 

error: Content is protected !!
Scroll to Top