ರಿಯಾಯಿತಿ ದರದ ಹೊಸ ಬಸ್ಸು ಪಾಸುಗಳ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, . 17. ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸಕಾಲ ಸಂಬಂಧಿತ ಸೇವೆಗಳಾದ ವಿದ್ಯಾರ್ಥಿ ರಿಯಾಯಿತಿ ದರದ ಬಸ್ಸು ಪಾಸು, ವಿಕಲಚೇತನರ ರಿಯಾಯಿತಿ ಬಸ್ಸು ಪಾಸು, ಅಂಧರ ಉಚಿತ ಬಸ್ಸು ಪಾಸು, ಸ್ವಾತಂತ್ರ್ಯ ಹೋರಾಟಗಾರರ ಉಚಿತ ಬಸ್ಸು ಪಾಸು, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್, ಅಪಘಾತ ಪರಿಹಾರ ನಿಧಿ ಇವುಗಳನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತದೆ.    


     

ನಿಗಮದ ಬಸ್ಸುಪಾಸು ಪಡೆಯುವ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ  ಸೇವಾಸಿಂಧು ಪೋರ್ಟಲ್ಗೆ ಅಪ್ಲೋಡ್ ಮಾಡಿದ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಶಾಲಾ/ಕಾಲೇಜುಗಳಲ್ಲಿ ನೀಡಬೇಕಾಗಿರುತ್ತದೆ. ಪಾಸಿನ ಶುಲ್ಕವನ್ನು ಶಾಲಾ/ಕಾಲೇಜಿನಲ್ಲಿ ಪಾವತಿಸಿ ಶಾಲಾ/ಕಾಲೇಜು ಮುಖಾಂತರ ಕರಾರಸಾ ನಿಗಮದ ಬಸ್ಸು ನಿಲ್ದಾಣದ ಪಾಸ್ ಕೌಂಟರ್ನಲ್ಲಿ ಮಾತ್ರ ಪಾವತಿಸಲು ಅವಕಾಶವಿರುತ್ತದೆ. ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು JPEG ಹಾಗೂ PDF ನಮೂನೆಯಲ್ಲಿ  ಸೇವಾಸಿಂಧು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಿ ಸದರಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಪಾಸ್ ಶುಲ್ಕವನ್ನು ನಿಗಮದ ಪಾಸ್ ಕೌಂಟರ್ನಲ್ಲಿ ನೀಡಿ ಪಾಸುಗಳನ್ನು ಪಡೆಯಬಹುದು ಎಂದು     ಕರಾರಸಾಸಂ, ಮಂಗಳೂರು,  ವಿಭಾಗೀಯ ನಿಯಂತ್ರಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಕರಾವಳಿಯಲ್ಲಿ ಹರಡುತ್ತಿರುವ ಕೆಂಗಣ್ಣು ಕಾಯಿಲೆ ಸಮಸ್ಯೆ...!

error: Content is protected !!
Scroll to Top