ಮಂಗಳೂರು :ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರಿಡಲು ಮಿಥುನ್ ರೈ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು . 17:  ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ -ಚೆನ್ನಯರ ಹೆಸರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ನಾಮಕರಣ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಆಗ್ರಹಿಸಿದರು.ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವು ಮಾಡಿ ಹಿಂದೆ ಇದ್ದ ಹುಲಿ ಕುಣಿತದ ಚಿಹ್ನೆ ಯನ್ನು ತಕ್ಷಣ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.

 

 

ತುಳುನಾಡು ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ಮರೆಮಾಚಿ, ಮಾಜಿ ಸಂಸದ ಶ್ರೀನಿವಾಸ ಮಲ್ಯರ ಪ್ರಯತ್ನದ ಫಲವಾಗಿ ಜಿಲ್ಲೆಗೆ ಬಂದಿರುವ ವಿಮಾನ ನಿಲ್ದಾಣಕ್ಕೆ ಯಾವ ಕೊಡುಗೆಯನ್ನೂ ನೀಡದ ಅದಾನಿಯ ಹೆಸರನ್ನು ಇಟ್ಟಿರುವುದು ಜಿಲ್ಲೆಯ ಜನರಿಗೆ ಮಾಡುತ್ತಿರುವ ಅಪಮಾನ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ದೂರಿದರು.

Also Read  'ಶೋಕಾಸ್ ನೋಟಿಸ್ ಗೆಲ್ಲ ನಾನು ಹೆದರಲ್ಲ'        ಸಿಎಂ ಸಿದ್ದರಾಮಯ್ಯ

 

 

 

error: Content is protected !!
Scroll to Top