ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪಬ್

(ನ್ಯೂಸ್ ಕಡಬ) newskadaba.com : ಬೆಂಗಳೂರು, ನ. 17: ಹೊಸೂರು – ಸರ್ಜಾಪುರ ರಸ್ತೆ (ಹೆಚ್ ಎಸ್ ಆರ್) ಬಡಾವಣೆಯ ಹ್ಯಾಂಗ್ ಓವರ್ ಪಬ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಭಾರಿ ಪ್ರಮಾಣದಲ್ಲಿ ಕಳೆದ ದಿನ ಬೆಂಕಿ ಕಾಣಿಸಿಕೊಂಡಿದೆ.

 

 

ಕಳೆದ ದಿನ ಪಬ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್  ವಿಷಯ ತಿಳಿಯುತ್ತಿದ್ದಂತೆ ಬೊಮ್ಮನ ಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹ್ಯಾಂಗ್ ಓವರ್ ಪಬ್ ಬಳಿ ಬಂದು ಶೀಘ್ರ ಬೆಂಕಿ ನಂದಿಸಲು ಸಹಕರಿಸಿದರು. ಪಬ್ ಭಾಗಶಃ ಸುಟ್ಟು ಹೋಗಿದ್ದು, ಅದೃಷ್ಟವಶಾತ್  ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Also Read  ದ.ಕ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಡಾ. ಕುಮಾರ್ ಅಧಿಕಾರ ಸ್ವೀಕಾರ

Xl

 

error: Content is protected !!
Scroll to Top