ಕಡಬ: ಮರದಿಂದ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.03. ಇಲ್ಲಿಗೆ ಸಮೀಪದ ಕುಟ್ರುಪ್ಪಾಡಿ ಎಂಬಲ್ಲಿ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸೋಮವಾರದಂದು ನಡೆದಿದೆ.

ಮೃತರನ್ನು ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ಪುಂಡೋಯಿ ಕೊಚ್ಚಿ ನಿವಾಸಿ ದಿ| ಹೊನ್ನಪ್ಪ ಗೌಡ ಎಂಬವರ ಪುತ್ರ ಜತ್ತಪ್ಪ ಗೌಡ(55) ಎಂದು ಗುರುತಿಸಲಾಗಿದೆ. ಇವರು ತನ್ನ ತನ್ನ ಜಮೀನಿನಲ್ಲಿದ್ದ ಮರದಿಂದ ತೋಟಕ್ಕೆ ಹಾಕಲೆಂದು ಸೊಪ್ಪು ಕಡಿಯುತ್ತಿದ್ದ ವೇಳೆ ಆಯತಪ್ಪಿ ಜಾರಿ ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟರೆನ್ನಲಾಗಿದೆ‌. ಈ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!

Join the Group

Join WhatsApp Group