ಹಿರಿಯ ಪತ್ರಕರ್ತ, ಬಿಗ್ ಬಾಸ್ ಸ್ಫರ್ಧಿ ರವಿ ಬೆಳಗೆರೆ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 13. ಹಿರಿಯ ಪತ್ರಕರ್ತ, ಖ್ಯಾತ ಬರಹಗಾರ ರವಿ ಬೆಳಗೆರೆ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.


ಬೆಂಗಳೂರು ಕಚೇರಿಯಲ್ಲಿದ್ದ ವೇಳೆಯಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ಅಂತಿಮ ದರ್ಶನಕ್ಕೆ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಬೆಂಗಳೂರಿನ ಪ್ರಾರ್ಥನಾ ಶಾಲೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮಾರ್ಚ್ 15, 1958ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಇವರು ಪತ್ರಿಕರ್ತರಾಗಿ ಅತೀ ಹೆಚ್ಚು ಓದುಗರ ಬಳಗವನ್ನು ಹೊಂದಿದ್ದರು. ಪತ್ರಿಕಾರಂಗದ ಹಲವು ವಿಭಾಗದಲ್ಲಿಯೂ ಕೆಲಸ ಮಾಡಿದ್ದರು.

Also Read  HMT ಕಾರ್ಖಾನೆ ಪುನಶ್ಚೇತನ: ನಿವೃತ್ತ ಕಾರ್ಮಿಕರಿಗೆ 361 ಕೋಟಿ ವೇತನ ಬಾಕಿ ಪಾವತಿಗೆ ಕ್ರಮ: HDK

error: Content is protected !!
Scroll to Top