ಪುತ್ತೂರು: ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, .12: ಕಳೆದ ದಿನ ರಾತ್ರಿ ವಿದ್ಯುತ್ ಕಂಬಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಬಲ್ನಾಡು ರಸ್ತೆಯ ಬಪ್ಪಳಿಕೆ ಎಂಬಲ್ಲಿ ನಡೆದಿದೆ.

 

 

ಪುತ್ತೂರು ಕಡೆಯಿಂದ ಬಲ್ನಾಡು ಕಡೆ ಹೋಗುತ್ತಿದ್ದ ಲಾರಿ ಬಪ್ಪಳಿಕೆ ಶ್ರೀ ಸತ್ಯ ನಾರಾಯಣ ಪೂಜಾ ಕಟ್ಟೆಯ ಬಳಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ತಕ್ಷಣ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು, ಢಿಕ್ಕಿಯಾಗಿ ಪರಾರಿಯಾದ ಲಾರಿಯನ್ನು ಮೆಸ್ಕಾಂ ಜೀಪಿನಲ್ಲಿ ಲಾರಿಯನ್ನು ಬೆನ್ನತ್ತಿದ್ದರು. ಇನ್ನು ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಅಂಬಿಕಾ ವಿದ್ಯಾಲಯಕ್ಕೆ ತಿರುಗುವ ರಸ್ತೆಯ ತನಕ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದವು. ಘಟನೆಯಿಂದಾಗಿ ಲಾರಿಯನ್ನು ತಡೆದು ಮೆಸ್ಕಾಂ ಗೆ ರೂ. 25 ಸಾವಿರ ನಷ್ಟ ಸಂಭವಿಸಿದ್ದು, ನಷ್ಟದ ಮೊತ್ತವನ್ನು ಲಾರಿಯವರು ಭರಿಸುವಂತೆ ತಿಳಿಸಲಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ ತಿಳಿಸಿದ್ದಾರೆ.

Also Read  ಅಕ್ರಮ ಮರಳುಗಾರಿಕೆ ಮತ್ತು ಸಾಗಾಟಕ್ಕೆ ಕಡಿವಾಣ

 

error: Content is protected !!
Scroll to Top