ಮಾಣಿ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಮಾಣಿ . 12: ಮಾಣಿ ಗ್ರಾಮದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂರ್ಣಿಮ(30)ರವರು ನವೆಂಬರ್ 9 ರಂದು ಸಂಜೆ ವೇಳೆಗೆ ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಯಿಂದ ಹೋದಾಕೆ ವಾಪಾಸ್ಸು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ.

 

 

ಈ ಬಗ್ಗೆ ಪತಿ ಮಾಹಿತಿ ಪಡೆದು ಮಾಣಿ ಪೇಟೆಯಲ್ಲಿ ವಿಚಾರಿಸಿದಾಗ ಆಕೆ ಬಸ್ಸಿನಲ್ಲಿ ಹಾಸನ ಕಡೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪತಿ ಸುಬ್ರಹ್ಮಣ್ಯ ಪ್ರಸಾದ್ ದೂರು ದಾಖಲಿಸಿದ್ದಾರೆ. ನಾಪತ್ತೆಯಾಗಿರುವ ಪೂರ್ಣಿಮ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಹೋಗಿದ್ದು, ಬ್ಯಾಂಕ್ ಪಾಸ್ ಬುಕ್, ಚಿನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಈ ಮಹಿಳೆಯ ಸುಳಿವು ಸಿಕ್ಕವರು ವಿಟ್ಲ ಠಾಣೆಗೆ ಅಥವಾ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Also Read  ಬಸ್ ನಿರ್ವಹಕನ ಶವ ಪತ್ತೆ: ಕೊಲೆ ಶಂಕೆ..!

 

 

error: Content is protected !!
Scroll to Top