ಪಂಜ: ಮೂಲಭೂತ ಸಮಸ್ಯೆಯ ಬಗ್ಗೆ ಪ್ರಧಾನಮಂತ್ರಿಗೆ ಸಿ.ಡಿ ಕಳುಹಿಸಿದ ಹೋರಾಟ ಸಮಿತಿ

(ನ್ಯೂಸ್ ಕಡಬ) newskadaba.com ಪಂಜ.10: ಮೂಲಭೂತ ಸಮಸ್ಯೆಯ ಬಗ್ಗೆ ವಿವರಿಸಿ ಕಮಿಲ ಮೊಗ್ರ ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರಿಂದ ಸಿ.ಡಿ ತಯಾರಿಸಲಾಗಿತ್ತು.

 

ಮೊಗ್ರ ಹೊಳೆಗೆ ಸೇತುವೆ ರಚನೆಯ ಬೇಡಿಕೆ ಹಲವಾರು ವರ್ಷಗಳಿಂದ ಇದ್ದರೂ ಇದುವರೆಗೂ ಈಡೇರಿಕೆಯಾಗಿಲ್ಲ. ಹೀಗಾಗಿ ಸಮಸ್ಯೆಯಗುತ್ತಿದೆ. ಅಲ್ಲದೇ ಗುತ್ತಿಗಾರು-ಕಮಿಲ-ಬಲ್ಪ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇಡೀ ರಸ್ತೆ ಡಾಮರೀಕರಣ ಕಂಡಿಲ್ಲ. ಈಗ ಕಮಿಲ ಹಾಗೂ ಕಮಿಲ- ಬಲ್ಪ ರಸ್ತೆ ತೀರಾ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಓಡಾಡಲು ತೀರಾ ಸಂಕಷ್ಟವಾಗಿದೆ. ಬಳ್ಪದಿಂದ ಗುತ್ತಿಗೆದಾರರು ಸಂಪರ್ಕಿಸುವ ಈ ರಸ್ತೆ ಹೊಂಡ ಗುಂಡಿಗಳಿಂದ ಆವರಿಸಿರುವ  ಕಮಿಲ ರಸ್ತೆ ಜನರ ನೆಮ್ಮದಿಗೆ ಭಂಗ ಮಾಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಏನೂ ಮಾಡಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸುಳ್ಯ-ಸುಬ್ರಹ್ಮಣ್ಯ ಹಾಗೂ ಪುತ್ತೂರು ಸುಬ್ರಹ್ಮಣ್ಯ ಹೀಗೆ ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಕುಗ್ರಾಮವಾಗಿರುವ ಕಮಿಲ ಗ್ರಾಮದ ಜನರಿಗೆ ಸಾಕಷ್ಟು ಸಮಸ್ಯೆಗಳಿದ್ದರೂ, ಕೇವಲ ಇರುವ ರಸ್ತೆಯನ್ನು ದುರಸ್ತಿಪಡಿಸಿ ಎನ್ನುವ ಬೇಡಿಕೆಗೆ ಸರಕಾರ ಈ ವರೆಗೂ ಸ್ಪಂದಿಸಿಲ್ಲ. ಈವರೆಗೆ ಅದೆಷ್ಟೋ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಯಾವುದೇ ಬಿಡಿಕಾಸುಪ್ರಯೋಜನವೂ ಆಗಿಲ್ಲ. ಆದರೂ ಕಮಿಲ ಗ್ರಾಮಸ್ಥರು ಇನ್ನೂ ಮನವಿ ಸಲ್ಲಿಸುತ್ತಲೇ ಇದ್ದಾರೆ.

Also Read  ಕುಂದಾಪುರ: ಫಾಲ್ಸ್ ನಲ್ಲಿ ನೀರಿಗಿಳಿದ ವಿದ್ಯಾರ್ಥಿ ನಾಪತ್ತೆ

 

 

 

ಇನ್ನು ಬಳ್ಳಕ್ಕ ಪ್ರದೇಶದಲ್ಲಿ ಕುಡಿಯುವ ನೀರಿನ ಟ್ಯಾಂಕ್ ದುರಸ್ಥಿ, ನೀರಿನ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ. ಭರವಸೆಗಳು ಮಾತ್ರವೇ ಲಭ್ಯ ವಾಗಿದ್ದು, ವ್ಯವಸ್ಥೆಯಾಗಿಲ್ಲ ಎಂದು ಗ್ರಾಮಾಸ್ಥರು ಹೇಳಿದರು. ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ  ಸಿ.ಡಿ ತಯಾರಿಸಿದ ಪ್ರತಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಂಚೆ ಮೂಲಕ ಇಂದು ಕಳುಹಿಸಲಾಗಿತ್ತು. ಅಂಚೆ ಕಛೇರಿಗೆ ಆಗಮಿಸಿದ ಸಮಿತಿಯ ಸದಸ್ಯರುಗಳು ಸಿ.ಡಿಯನ್ನು ಕಳುಹಿಸಿದರು.

Also Read  ಪಡುಬಿದ್ರೆ :ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು

 

 

error: Content is protected !!
Scroll to Top