ಲ್ಯಾಪ್‍ಟಾಪ್ ಇಲ್ಲದೇ ಬಡ ವಿದ್ಯಾರ್ಥಿನಿಯ ಪರದಾಟ ➤ ಆನ್‍ಲೈನ್ ಕ್ಲಾಸ್ ತಪ್ಪಿದ್ದಕ್ಕೆ ನೊಂದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಹೈದರಾಬಾದ್ . 10: ಓದಿಲ್ಲದೇ ನಾನು ಬದುಕಲಾರೆ, ಅಪ್ಪ-ಅಮ್ಮ ಕ್ಷಮಿಸಿ ಎಂದು ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಧ್‍ನಗರದಲ್ಲಿ ನಡೆದಿದೆ.ಆತ್ಮಹತ್ಯೆಗೆ ಮುನ್ನ ಐಶ್ವರ್ಯಾ ಡೆತ್ ನೋಟ್ ಬರೆದು, ತನ್ನ ಈ ನಿರ್ಧಾರಕ್ಕೆ ಬಡತನವೇ ಕಾರಣ ಎಂಬುದನ್ನ ಪರೋಕ್ಷವಾಗಿ ಹೇಳಿದ್ದಾಳೆ. ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನಿಂದಾಗಿ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಇನ್ನು ನಾನು ಓದದೇ ಬದುಕಲಾರೆ. ಈ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರ ಎಂದು ಅನ್ನಿಸುತ್ತಿದೆ. ನಾನು ನಿಮಗೆ ಒಳ್ಳೆಯ ಮಗಳು ಆಗಲು ಸಾಧ್ಯವಾಗಲಿಲ್ಲ. ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಎಂದು ಐಶ್ವರ್ಯಾ ಪತ್ರದಲ್ಲಿ ಬರೆದಿದ್ದಾಳೆ.

Also Read  ಸುಳ್ಯ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು- ನಗದು ಕಳವು ➤ ದೂರು ದಾಖಲು

 

ಕೆಲ ದಿನಗಳ ಹಿಂದೆ ಶಿಷ್ಯವೇತನ 80 ಸಾವಿರ ಸಿಗಲಿದೆ ಎಂದು ಮಗಳು ಹೇಳಿದ್ದಳು. ಆದ್ರೆ ಕೊರೊನಾದಿಂದಾಗಿ ಹಣ ಜಮೆ ಆಗಿರಲಿಲ್ಲ. ಆನ್‍ಲೈನ್ ಕ್ಲಾಸ್ ಗಾಗಿ ಸೆಕೆಂಡ್ ಹ್ಯಾಂಡ್ ಲ್ಯಾಪ್‍ಟಾಪ್ ಕೊಡಿಸುವಂತೆ ಮಗಳು ಹೇಳಿದ್ದಳು. ಸ್ವಲ್ಪ ದಿನಗಳ ನಂತರ ಕೊಡಿಸುವೆ ಎಂದು ಹೇಳಿದ್ದೆ. ಆದ್ರೆ ಮತ್ತೆ ಯಾವತ್ತು ಐಶ್ವರ್ಯಾ ಲ್ಯಾಪ್‍ಟ್ಯಾಪ್ ಕೇಳಿರಲಿಲ್ಲ. ಪದವಿ ಬಳಿಕ ಐಎಎಸ್ ಆಗಬೇಕೆಂದ ಕನಸು ಕಂಡಿದ್ದಳು ಎಂದು ತಂದೆ ಹಾಕಿದ್ದಾರೆ. ತೀರಾ ಬಡತನದಿಂದ ಕೂಡಿದ್ದ ಕುಟುಂಬ ಲಾಕ್‍ಡೌನ್ ನಿಂದಾಗಿ ಐಶ್ವರ್ಯಾ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು.

Also Read  ಸುಳ್ಯದಲ್ಲಿ ಶಾಸಕ ಅಂಗಾರ ಗೆದ್ದು ಸಚಿವರಾಗಲಿದ್ದಾರೆ : ಪುಲಸ್ತ್ಯಾ ರೈ

 

 

error: Content is protected !!
Scroll to Top