(ನ್ಯೂಸ್ ಕಡಬ) newskadaba.com ಬೆಂಗಳೂರು ನ. 10: ಕೋವಿಡ್ ಅಬ್ಬರದ ನಡುವೆ ಶಾಲೆ ತೆಯುವುದರ ಬಗ್ಗೆ ಇನ್ನೂ ಸಭೆ ಸಮಾಲೋಚನೆಗಳು ನಡೆಯುತ್ತಲೇಯಿದೆ. ಇದರ ನಡುವೆ ನವೆಂಬರ್ 17ರಿಂದ ಡಿಗ್ರಿ ಕಾಲೇಜ್ ಆರಂಭಕ್ಕೆ ಕಾಲೇಜು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದಾಗಿ ಕಠಿಣ ಮಾರ್ಗಸೂಚಿಗಳನ್ನೇ ಪ್ರಕಟಿಸಿದೆ.
ಕಾಲೇಜ್ ಆರಂಭಕ್ಕೆ 3 ದಿನ ಮೊದಲು ಬೋಧಕರು, ವಿದ್ಯಾರ್ಥಿಗಳು, ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಬೋಧಕರು ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಧರಿಸಬೇಕು. ಅವಶ್ಯಕತೆ ಇದ್ದರೆ ಪಾಳಿ ವ್ಯವಸ್ಥೆಯಲ್ಲಿ ಬೋಧನಾ ವ್ಯವಸ್ಥೆಯನ್ನ ಕಾಲೇಜುಗಳು ಮಾಡಿಕೊಳ್ಳಬಹುದು. ಕೆಮ್ಮು, ಜ್ವರ ಲಕ್ಷಣಗಳು ಇದ್ದರೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ. ಪ್ರವೇಶ, ನಿರ್ಗಮನ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು.ಕಾಲೇಜ್ ಆವರಣದಲ್ಲಿ ಲೈಬ್ರರಿ, ಕ್ಯಾಂಟೀನ್ ತೆರೆಯುವಂತಿಲ್ಲ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮನೆಯಿಂದಲೇ ಊಟ, ನೀರಿನ ಬಾಟಲಿ ತರಬೇಕು. ವಿದ್ಯಾರ್ಥಿಗಳು ಸಹ ಕಾಲೇಜ್‍ನಲ್ಲಿ ದೈಹಿಕ ಅಂತರಕ್ಕೆ ಅಗತ್ಯ ಕ್ರಮವಹಿಸಬೇಕು.
ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ಕಾಲೇಜ್‍ಗೆ ಬರಲು ಇಚ್ಚಿಸದ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡುವಂತಿಲ್ಲ. ಕಾಲೇಜ್‍ಗೆ ಬರಲು ಇಚ್ಚಿಸದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ನೀಡಬೇಕು. ಕಾಲೇಜ್ ಆವರಣದಲ್ಲಿ ಗುಂಪು ಸೇರುವಂತಿಲ್ಲ. ಕಾಲೇಜ್‍ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಎನ್‍ಸಿಸಿ, ಎನ್‍ಎಸ್‍ಎಸ್ ಚಟುವಟಿಕೆ ಆರಂಭಿಸುವಂತಿಲ್ಲ ಎಂದು ದೃಢ ನಿರ್ಧಾರನ್ನು ಪ್ರಕಟಿಸಿದೆ .ಡಿಸೆಂಬರ್ 2ನೇ ವಾರದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು ತರಗತಿಯಷ್ಟೇ ಆರಂಭವಾಗುವ ಸಾಧ್ಯತೆಯಿದೆಯೆಂದು ತಿಳಿಸಿದೆ.