ಕಾಸರಗೋಡು: ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಕಾಸರಗೋಡು.9: ಬಂದ್ಯೋಡು ಸಮೀಪ ಅಡ್ಕದಲ್ಲಿ ನಡೆದ ಗುಂಡಿನ ದಾಳಿ ಹಾಗೂ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಕುಂಬಳೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉಳಿಯತ್ತಡ್ಕದ ಸಮದಾನಿ(28) ಎಂದು ಗುರುತಿಸಲಾಗಿದೆ.

 

 

ಈತನ ವಿರುದ್ದ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಎಂಟಕ್ಕೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣ, ಲೂಟಿ, ಗಾಂಜಾ ಪ್ರಕರಣಗಳು ಈತನ ಮೇಲಿದೆ. ಕೆಲ ದಿನಗಳ ಹಿಂದೆ ಮಂಜೇಶ್ವರ ಕೊಡ್ಲಮೊಗರು ಎಂಬಲ್ಲಿ ಪೊಲೀಸ್ ವಾಹನಕ್ಕೆ ಈತ ಇನ್ನೊಂದು ವಾಹನ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದನು. ಇದೀಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಮಂಜೇಶ್ವರ :ಅಕ್ರಮ ಗಾಂಜಾ ಸಾಗಾಟ ➤ ಆರೋಪಿ ಪೊಲೀಸ್ ವಶಕ್ಕೆ

 

 

error: Content is protected !!
Scroll to Top