ಕಾರವಾರ ಜೈಲಿನಲ್ಲಿದ್ದ ಖೈದಿ ಮೃತ್ಯು➤ ಖೈದಿ ಸಾವಿನ ಸುತ್ತ ಅನುಮಾನದ ಹುತ್ತ

(ನ್ಯೂಸ್ ಕಡಬ) newskadaba.com ಕಾರವಾರ . 09: ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿಯೋರ್ವ ಸಾವನ್ನಪ್ಪಿದ ಘಟನೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ದೇವಳಮಕ್ಕಿ ಮೂಲದ ಸಿಂಧೂರ ಲಕ್ಷ್ಮಣ (35) ಮೃತ ವ್ಯಕ್ತಿ.‌ ಜೂನ್ 14, 2018ರಂದು ಕಾರವಾರ ತಾಲೂಕಿನ ಬೇಳೂರಿನಲ್ಲಿ ತಮಿಳುನಾಡು ಮೂಲದ ಚಲ್ಲಯ್ಯ ಎಂಬಾತ ಕೊಲೆಯಾಗಿದ್ದ.

ಪ್ರಕರಣ ಸಂಬಂಧ ಸಿಂಧೂರು ಲಕ್ಷ್ಮಣನನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು. ಎರಡು ವರ್ಷಗಳಿಂದ ಜೈಲಿನಲ್ಲಿದ್ದ ಲಕ್ಷ್ಮಣನನ್ನ ಭಾನುವಾರ ಜೈಲು ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದರು.ಮಧ್ಯಾಹ್ನ ಸಿಂಧೂರು ಲಕ್ಷ್ಮಣ ಸಾವನ್ನಪ್ಪಿದ ಬಗ್ಗೆ ಜೈಲು ಅಧಿಕಾರಿಗಳು ಲಕ್ಷ್ಮಣನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದವರು ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನಾ ಸಂಬಂಧ ಸ್ಥಳಕ್ಕೆ ಜಿಲ್ಲಾ ಸಿಜೆಎಂ ನ್ಯಾಯಾಧೀಶರಾದ ಎನ್ ಆರ್ ರಮೇಶ್ ಭೇಟಿ ನೀಡಿ ಮೃತದೇಹದ ಪರಿಶೀಲನೆ ನಡೆಸಿದ್ದಾರೆ.

Also Read  ಕೊಣಾಜೆ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿಗೆ ಥಳಿತ ► ಆಸ್ಪತ್ರೆಗೆ ದಾಖಲು

 

 

error: Content is protected !!
Scroll to Top