ಕುಕ್ಕೆ ಚಂಪಾ ಷಷ್ಠಿ ಜಾತ್ರೋತ್ಸವ ➤ ಶೀಘ್ರವೇ ಜಿಲ್ಲಾಮಟ್ಟದ ಸಭೆ: ಸಚಿವ ಕೋಟ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ . 09 : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಬಾರಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ನಡೆಸುವ ಬಗ್ಗೆ ಚರ್ಚಿಸಲು ಶೀಘ್ರವೇ ಜಿಲ್ಲಾಮಟ್ಟದ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಜಾತ್ರೋತ್ಸವ ನಡೆಸುವ ಕುರಿತು ಸಮಗ್ರ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

 

 

ಕೋವಿಡ್‌-19 ಗಮನದಲ್ಲಿಟ್ಟುಕೊಂಡು, ಅದರ ಮುಂಜಾಗ್ರತಾ ನಿಯಮ ಪಾಲಿಸಿಕೊಂಡು ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ನಡೆಸುವ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಾರಾಂತ್ಯ ಸಭೆ ನಡೆಯಲಿದೆ. ಎಲ್ಲ ಸಾಧಕ, ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಚಂಪಾ ಷಷ್ಠಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Also Read  ಕಾಸರಗೋಡು: ಪತ್ರಕರ್ತ ಸೇರಿದಂತೆ ಇಬ್ಬರಿಗೆ ಕೊರೋನ ಪಾಸಿಟಿವ್

 

 

error: Content is protected !!
Scroll to Top