ಯೇನೆಕಲ್ಲು: ನ.13 ರಂದು ಗೌರವ್ ಗಾರ್ಡನ್ ಸಭಾಂಗಣದಲ್ಲಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಯೇನೆಕಲ್ಲು, .9: ನ.13 ರಂದು ಶಶಾಂಕ ಚಾರಿಟೇಬಲ್ ಟ್ರಸ್ಟ್ ಯೇನೆಕಲ್ಲು ಇದರ ಆಶ್ರಯದಲ್ಲಿ ಯೇನೆಕಲ್ ಗೌರವ್ ಗಾರ್ಡನ್ ಸಭಾಂಗಣದಲ್ಲಿ ರಕ್ತದಾನ ಶಿಬಿರವು ನಡೆಯಲಿದೆ.

 

 

ಟ್ರಸ್ಟ್ ಕಾರ್ಯದರ್ಶಿ, ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾದ ಶ್ರೀಮತಿ ಜಾನಕಿ ಮುತ್ತಪ್ಪ ಮಾಸ್ತರ್ ಮಾದನಮನೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡುರವರು ಅಭ್ಯಾಗತರಾಗಿ ಭಾಗವಹಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಮತ್ತು ಅಧಿಕಾರಿಗಳು, ಸದಸ್ಯರುಗಳು ಗೌರವ ಉಪಸ್ಥಿತರಾಗಿರಲಿದ್ದಾರೆ.

Also Read  ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ➤ ಮಹಿಳೆಯ ಗಾಯ

 

 

error: Content is protected !!
Scroll to Top