ಸುಳ್ಯ: ಖಾಸಗಿ ಬಸ್ ನಿಲ್ದಾಣದ ರಸ್ತೆ ಬದಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಲಾಬ್ ದುರಸ್ಥಿ

(ನ್ಯೂಸ್ ಕಡಬ) newskadaba.com ಸುಳ್ಯ, .8: ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಮುಖ್ಯ ರಸ್ತೆ ಬದಿಗೆ ಅಳವಡಿಸಿದ ಸ್ಲಾಬ್ ತುಂಡಾಗಿ ಹಾಗೂ ಕುಸಿದು ಬಿದ್ದು, ಪಾದಾಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.

 

 

ಇದರಿಂದಾಗಿ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಶ್ರಮದಾನ ಮಾಡಿ ದುರಸ್ಥಿ ಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸುಳ್ಯ ಘಟಕದ ಗೌರವ ಅಧ್ಯಕ್ಷ ಅಶೋಕ್ ಕುಮಾರ್, ರುಕ್ಮಯ್ಯ ಕುರುಂಜಿ, ನಾರಾಯಣ, ಗಣೇಶ ಪಲ್ಲತಡ್ಕ, ವಿಜಯ ಕುರುಂಜಿ, ಚಿದಾನಂದ ಕಲ್ಲಗುಡ್ಡೆ, ಗಿರೀಶ ಕಲ್ಲಗುಡ್ಡೆ, ಮೋಹನ ಕಲ್ಲಗುಡ್ಡೆ, ದೀಕ್ಷಿತ್ ಕುಮಾರ್ ಜಯನಗರ, ಜಯರಾಜ್ ಕೊಂಬರಡ್ಕ, ಬಾಲು ಪೇಪರ್ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

Also Read  ಮಹಿಳಾ ಕುಸ್ತಿ ಸ್ಪರ್ಧೆ - ಮೆಲ್ಕಾರ್ ಮಹಿಳಾ ಕಾಲೇಜಿನ ಸನಾ ಸುಲ್ತಾನಳಿಗೆ ಚಿನ್ನದ ಪದಕ

 

error: Content is protected !!
Scroll to Top