ಸಬಳೂರು: ಶ್ರೀರಾಮ ಗೆಳೆಯರ ಬಳಗದಿಂದ ಶ್ರಮದಾನ ► ಶ್ರೀರಾಮ ಭಜನಾ ಮಂದಿರದ ವಠಾರ ಸ್ವಚ್ಚತೆ

(ನ್ಯೂಸ್ ಕಡಬ) newskadaba.com ಕಡಬ, ಅ.03. ಪುತ್ತೂರು ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾ ನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಶ್ರೀ ರಾಮ ಭಜನಾ ಮಂದಿರದ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯ ಸೋಮವಾರದಂದು ನಡೆಯಿತು.

ಆಲಂಕಾರು ಸಿ.ಎ. ಬ್ಯಾಂಕ್ ಉದ್ಯೋಗಿ ರಾಧಾಕೃಷ್ಣ ತುಂಬೆತಡ್ಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛ ಕಾರ್ಯ ದಿನವೊಂದಕ್ಕೆ ಮೀಸಲಾಗದೆ ಪ್ರತಿ ದಿನ ಮನೆ ಮನದಿಂದ ಆರಂಭವಾಗಬೇಕು. ಆ ಮೂಲಕ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಕನಸನ್ನು ನನಸು ಮಾಡಬೇಕು . ಸ್ವಚ್ಛತೆಗೆ ಆದ್ಯತೆ ನೀಡಿ ಶ್ರೀ ರಾಮ ಗೆಳೆಯರ ಬಳಗ ಹಮ್ಮಿಕೊಂಡ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭ ಶ್ರೀ ರಾಮ ಭಜನಾ ಮಂದಿರದ ಮುಖಂಡರಾದ ನಾಗೇಶ್ ಕಡೆಂಬ್ಯಾಲು, ಉಮೇಶ್ ಬುಡಲೂರು, ಶ್ರೀರಾಮ ಗೆಳೆಯರ ಬಳಗದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Also Read  ಜಲಾಶಯಕ್ಕೆ ಹಾರಿ ಶಿಕ್ಷಕ ಆತ್ಮಹತ್ಯೆ..!

ಗೆಳೆಯರ ಬಳಗದ ಅಧ್ಯಕ್ಷ ಚಿದಾನಂದ ಪಾನ್ಯಾಲು ಸ್ವಾಗತಿಸಿ, ನಿರೂಪಿಸಿದರು. ಭುವನೇಶ್ ಬುಡಲೂರು ವಂದಿಸಿದರು.

error: Content is protected !!
Scroll to Top