ಉಳ್ಳಾಲ : ಮೂರೇ ಘಂಟೆಯಲ್ಲಿ ಸರಗಳ್ಳನ ಅರೇಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ . 07: ಕೆಲಸ ಮುಗಿಸಿ ಬರುತ್ತಿದ್ದ ಯುವತಿಯ ಚಿನ್ನದ ಸರ ಎಗರಿಸಿದ್ದ ಖದೀಮನನ್ನು ಉಳ್ಳಾಲ ಪೊಲೀಸರು ಘಟನೆ ನಡೆದ ಮೂರೇ ಘಂಟೆಯಲ್ಲಿ ಬಂದಿಸಿದ್ದಾರೆ.ಆರೋಪಿಯನ್ನು ಕೇರಳ ಮೂಲದ ಸುಲ್ತಾನ್ (28) ಎಂದು ತಿಳಿದು ಬಂದಿದೆ.

 

ಶುಕ್ರವಾರ ಸಂಜೆ ವೇಳೆಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಯುವತಿಯ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಅಲ್ಲಲ್ಲಿ ಬಂದೋಬಸ್ತ್ ನಡೆಸಿ ಸಿಸಿಟಿವಿಯಲ್ಲಿ ಸೆರೆಸಿಕ್ಕ ಬುಲೆಟ್ ಮತ್ತು ಆರೋಪಿಯ ಟೀಶಟ್೯ ಆಧಾರದಲ್ಲಿ, ಆರೋಪಿ ಬಾರ್ ಒಳಗಡೆ ಪ್ರವೇಶಿಸುತ್ತಿದ್ದಂತೆ ಸೆರೆ ಹಿಡಿದು ಬಂಧಿಸಿದ್ದಾರೆ. ಎಸಿಪಿ ರಂಜಿತ್ ನೇತೃತ್ವದಲ್ಲಿ ಉಳ್ಳಾಲ ಠಾಣಾಧಿಕಾರಿ ಸಂದೀಪ್, ಪಿಎಸ್ ಐ ಗಳಾದ ಶಿವಕುಮಾರ್, ಪ್ರದೀಪ್ ಹಾಗೂ ಕ್ರೈಂ ತಂಡ ಮತ್ತು ಕೊಣಾಜೆ ಠಾಣೆಯ ಪಿಎಸ್ ಐ ಶರಣಪ್ಪ ಭಂಡಾರಿ ನೇತೃತ್ವದ ಕ್ರೈಂ ತಂಡ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದರು.

Also Read  ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ

 

 

error: Content is protected !!
Scroll to Top