ಪುತ್ತೂರು: ಅತ್ಯುತ್ತಮ ದಿಗ್ವಿಜಯ ವರದಿಗಾರ ಅಶೋಕ್‍ಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್

(ನ್ಯೂಸ್ ಕಡಬ) newskadaba.com ಪುತ್ತೂರು, . 07: ದಿಗ್ವಿಜಯ ನ್ಯೂಸ್ ಕನ್ನಡ ಸುದ್ದಿ ವಾಹಿನಿಯ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಸಂದರ್ಭ ಅತ್ಯುತ್ತಮ ವರದಿ ಮಾಡಿದ ಕೃಷ್ಣ ನಗರ ಬಡಾವು ನಿವಾಸಿ ಅಶೋಕ್ ಪೂಜಾರಿಯವರಿಗೆ ರಾಷ್ಟ್ರೀಯ ಟೆಲಿವಿಷನ್ ಅವಾರ್ಡ್ ಗೌರವ ಲಭಿಸಿದೆ.

 

 

 

ಮಂಗಳೂರು ಗೊಲಿಬಾರ್ ಸಂದರ್ಭದಲ್ಲಿ ವರದಿಗಾರಿಕೆ ಮಾಡಿ ವೀಕ್ಷಕರ ಮನಗೆದ್ದಿದ್ದಾರೆ. ಮೊದಲು ಪುತ್ತೂರಿನಲ್ಲಿ ಸುದ್ದಿಬಿಡುಗಡೆ ದಿನಪತ್ರಿಕೆ, ಪ್ರಜಾ ವಾಹನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ, ಬಳಿಕ ದಿಗ್ವಿಜಯ ವಾಹಿನಿಗೆ ಸೇರ್ಪಡೆಗೊಂಡಿದ್ದರು. ಇದೀಗ ಉಡುಪಿಯಿಂದ ಮಂಗಳೂರಿಗೆ ವರ್ಗವಣೆಗೊಂಡ ಅಶೋಕ್ ರವರು ತಮ್ಮ ಅತ್ಯುತ್ತಮ ವರದಗಾರಿಕೆಯಿಂದ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದರು. ಇವರು ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಬಡಾವು ಮೋನಪ್ಪ ಪೂಜಾರಿ ಹಾಗೂ ಕಮಲ ದಂಪತಿ ಪುತ್ರನಾಗಿರುವ ಅಶೋಕ್ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿರುತ್ತಾರೆ. ಅವರ ಸಾಧನೆಯನ್ನು ಗಮನಿಸಿದ ಇಂಡಿಯನ್ ಟೆಲಿವಿಷನ್ ನ್ಯೂಸ್ ಡಾಟ್ ಕಾಮ್ ಮಾಧ್ಯಮ ಸಂಸ್ಥೆ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ.

Also Read  ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನ ಹತ್ಯೆ ➤ ಆರೋಪಿಗಳು ಅರೆಸ್ಟ್

 

 

error: Content is protected !!
Scroll to Top