(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.02. ಹುಲಿವೇಷದಾರಿಗಳೊಂದಿಗೆ ಅರಣ್ಯ ಸಚಿವರು ಹೆಜ್ಜೆ ಹಾಕಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಹುಲಿವೇಷ ಕುಣಿತವನ್ನು ಆಯೋಜಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ರಾಜ್ಯ ಪರಿಸರ, ಜೀವಶಾಸ್ತ್ರ ಮತ್ತು ಅರಣ್ಯ ಸಚಿವರೂ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ರಮಾನಾಥ ರೈ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಹುಲಿವೇಷಧಾರಿಗಳೊಂದಿಗೆ ತಾನೂ ಹೆಜ್ಜೆ ಹಾಕಿದರು. ಹುಲಿವೇಷ ಕುಣಿತದೊಂದಿಗೆ ತಾನೂ ಕುಣಿಯುವುದರ ಮೂಲಕ ತನಗೆ ಕುಣಿತ ಎನ್ನುವುದು ಇಷ್ಟ ಎಂಬುವುದನ್ನು ವ್ಯಕ್ತಪಡಿಸಿದರು. ಇವರ ಕುಣಿತ ನೋಡಿ ಜತೆಯಲ್ಲಿದ್ದ ಪ್ರಕಾಶ್ ರೈ, ಪುನಿತ್ ರಾಜ್‍ಕುಮಾರ್ ಅವರು ಕೂಡ ಸಣ್ಣದಾಗಿ ಹೆಜ್ಜೆ ಹಾಕುತ್ತಿದ್ದರು.