ರಾಜ್ಯ ಸರ್ಕಾರದಿಂದ ಕರೆಂಟ್ ಶಾಕ್ ➤ ವಿದ್ಯುತ್‌ ದರ ಹೆಚ್ಚಳ

(ನ್ಯೂಸ್ ಕಡಬ) newskadaba.com ಬೆಂಗಳೂರು . 06: ಕೊರೊನಾದಿಂದಾಗಿ ಜನರು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ರಾಜ್ಯ ಸರ್ಕಾರ ಮತ್ತೆ ಜನನರಿಗೆ ಕರೆಂಟ್ ಶಾಕ್ ಕೊಟ್ಟಿದೆ. ರಾಜ್ಯದ ಎಲ್ಲಾ ವಿದ್ಯುತ್‌ ಕಂಪನಿಗಳ ವಿದ್ಯುತ್‌ ದರವನ್ನು ಸರಾಸರಿ 5.4% ದಂತೆ, ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ( KERC) ಹೊರಡಿಸಿರುವ 2020-21 ನೇ ಸಾಲಿನ ವಿದ್ಯುತ್‌ ಪರಿಷ್ಕೃತ ದರವು ನವೆಂಬರ್‌ 1 ರಿಂದಲೇ ಅನ್ವಯವಾಗಲಿದೆ.

2020-21 ರ ಸಾಲಿನ ಪರಿಷ್ಕೃತ ದರ ನವೆಂಬರ್‌ 1 ರಿಂದ ಅನ್ವಯವಾಗುವುದಿದ್ದರೂ, ಲಾಕ್‌ಡೌನ್‌ ಅವಧಿಯ 7 ತಿಂಗಳ ದರಗಳನ್ನು ಮುಂದಿನ ಸಾಲಿನಲ್ಲಿ ವಸೂಲು ಮಾಡಲಾಗುತ್ತದೆ ಎಂದು ಕೆಇಆರ್‌ಸಿ ಹೇಳಿದ್ದು, 2021-22 ನೇ ಸಾಲಿನ ದರಗಳು ಮತ್ತೆ ಪರಿಷ್ಕರಣೆಯಾಗಲಿವೆ ಎಂದು  ಸ್ಪಷ್ಟಪಡಿಸಿದೆ. ಹಾಗಾಗಿ ಈ ಹೊಸ ದರಗಳು ನವೆಂಬರ್‌ 1 ರಿಂದ ಮಾರ್ಚ್ 31ರ ವರೆಗಿನ ಐದು ತಿಂಗಳಿಗೆ ಮಾತ್ರ ಅನ್ವಯವಾಗಲಿದೆ.

Also Read  ಮಂಗಳೂರು ವಿ. ವಿ : ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಆರಂಭ

ಕೊರೋನಾ ಸೋಂಕು ತಗುಲಿದ ನಂತರ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲಾ ವಲಯಗಳು ನಷ್ಟದ ಸುಳಿಗೆ ಸಿಲುಕಿವೆ. ಜನತೆ ಉದ್ಯೋಗ, ವೇತನ ಇಲ್ಲದೆ ಕಂಗಾಲಾಗಿದ್ದಾರೆ. ವಿದ್ಯುತ್ ದರ ಏರಿಕೆಯನ್ನು ಮುಂದೂಡುವುದು ಒಳಿತು.ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರ ಸ್ವಾಮಿ ಅಭಿಪ್ರಾಯ ವ್ಯಕ್ತಪಟಿಸಿದ್ದಾರೆ.

error: Content is protected !!
Scroll to Top