ಏಕಾಏಕಿ ಗೋಡೆ ಕುಸಿತ ➤ ಕಾರ್ಮಿಕ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, . 06: ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯಯಲ್ಲಿ ಏಕಾಏಕಿ ಗೋಡೆ ಸಮೇತ ಶೇಡ್ ಕುಸಿದು ಬಿದ್ದಿದ್ದು, ಬಿಹಾರದ ಕಾರ್ಮೀಕರೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಪೂರನ್ ಪೂಜಾರಿ(19) ಎಂದು ಗುರುತಿಸಲಾಗಿದೆ.

 

 

ಇಸ್ಕಾನ್ ದೇವಸ್ಥಾನ ಸಮೀಪದಲ್ಲಿ ಸಿಕಾನ್ ಕಂಪನಿ ವತಿಯಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲಾಗಿತ್ತು. ಇಂದು ಮುಂಜಾನೆ ಸುಮಾರಿಗೆ ಏಕಾಏಕಿ ಗೋಡೆ ಕುಸಿದು ಶೆಡ್ ಮೇಲೆ ಬಿದ್ದಿತ್ತು. ಶೆಡ್ ಸಹ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಭವಾನಿ ಸಿಂಗ್ (21) ಹಾಗೂ ಮಿಥುನ್ (22) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಇಂದು ವಿಜಯ್ ಹಜಾರೆ ಫೈನಲ್ ಟ್ರೋಫಿ ➤ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸೆಣಸಾಟ

 

 

error: Content is protected !!