ಸ್ನಾನಕ್ಕೆ ತೆರಳಿದ ಇಬ್ಬರು ಬಾಲಕರು ನೀರು ಪಾಲು ➤ ಓರ್ವನ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ . 06: ಉಡುಪಿಯ ಮುಟ್ಟಳಿವೆ ಬಳಿ ಸ್ನಾನಕ್ಕೆ ತೆರಳಿದ ಮೂವರು ಬಾಲಕರ ಪೈಕಿ ಇನ್ನರು ನೀರು ಪಾಲದ ಘಟನೆ ನಡೆದಿದೆ. ಓರ್ವ ಬಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.  ಮೋಸಿನ್ (16) ಮತ್ತು ಮೊಹಮಗಮದ್ ರಾಯಿಸ್ (16) ಮೃತಪಟ್ಟ ಬಾಲಕರು ಎಂದು ತಿಳಿದು ಬಂದಿದೆ.

 

 

ಮೊಹಮ್ಮದ್ ನಬೀಲ್ (16) ಎಂಬ ಬಾಕನನ್ನು ಸ್ಥಳೀಯರು ಕಾಪಾಡಿದ್ದಾರೆ.  ಮೂವರು ಬಾಲಕರು ಹಜೆಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಳಿಕೆ ಬಳಿ ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಕಂಡ ಮಹಿಳೆಯೊಬ್ಬರು ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಮೂವರನ್ನು ಮೇಲಕೆತ್ತಲಾಗಿದೆ. ಆದರೆ ಓರ್ವ ನೀರಿನಲ್ಲಿಯೇ ಮೃತಪಟ್ಟಿದ್ದ. ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.  ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆ      ➤  ಆರೋಪಿ ಅಂದರ್

 

error: Content is protected !!
Scroll to Top