ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು . 05: ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಅನಧಿಕೃತ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಮಾಡಿದ್ದಾರೆ.

 

ಕಳೆದ ತಿಂಗಳು ವಕೀಲರದ ಹರ್ಷ ಮುತಾಲಿಕ್, ಮಸೀದಿಯಲ್ಲಿನ ಧ್ವನಿ ವರ್ಧಕಗಳಿಂದ ಇತರೇ ಧರ್ಮದರಿಗೆ ತೊಂದರೆ ಆಗುತ್ತಿದೆ. ದಿನಕ್ಕೆ ಐದಾರು ಬಾರಿ ಪ್ರಾರ್ಥನೆ ಮಾಡಲಾಗತ್ತೆ. ಇದ್ದರಿಂದ ಮಕ್ಕಳಿಗೆ, ವಯಸ್ಸಾದವರಿಗೆ, ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದರು.ಈಗ ಈ ದೂರಿಗೆ ಸ್ಪಂದಿಸಿದ ಡಿಜಿ ಪ್ರವೀಣ್ ಸೂದ್ ರಾಜ್ಯದ ಎಲ್ಲ ಜಿಲ್ಲೆಗಳ ಎಸ್‍ಪಿಗಳಿಗೆ ಹಾಗೂ ನಗರದ ಕಮಿಷನರ್‍ಗೆ ಪತ್ರ ಬರೆದಿದ್ದು, ರಾಜ್ಯಾದ್ಯಂತ ಮಸೀದಿಗಳಲ್ಲಿ ಹಾಕಿರುವ ಅನಧಿಕೃತ ಧ್ವನಿವರ್ಧಕ ತೆರವಿಗೆ ಆದೇಶ ಮಾಡಿದ್ದಾರೆ. ಜೊತೆಗೆ ಯಾವುದೇ ಅನಧಿಕೃತ ಧ್ವನಿವರ್ಧಕ ಬಳಕೆ ಮಾಡಿದ್ದರೆ, ಅದರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ತೆರವುಗೊಳಿಸಲು ಸೂಚಿಸಿದ್ದಾರೆ.

Also Read  ಜೂನಿಯರ್ ವಿಶ್ವ ವೇಟ್ ಲಿಫ್ಟಿಂಗ್: ಧನುಷ್ ಗೆ ಕಂಚು

 

error: Content is protected !!
Scroll to Top