ಬೆಳ್ತಂಗಡಿ :ಶ್ರವಣದೋಷದ ಕಂದಮ್ಮನ ಚಿಕಿತ್ಸೆಗೆ ಸಿಎಂ BSY ನಿಂದ ನೆರವು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 05: ಬೆಳ್ತಂಗಡಿಯ ತಣ್ಣಿರು ಪಂತದಲ್ಲಿ ಶ್ರವಣದೋಷದಿಂದ ಮಾತನಾಡಲು ಸಾದ್ಯವಾಗದೆ ಸಮಸ್ಯೆ ಎದುರಿಸುತ್ತಿರುವ ಮೂರು ವರುಷ 7 ತಿಂಗಳ ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ಸಿಎಂ ಬಿಎಸ್‍ವೈ ರವರು ವಿಶೇಷ ಪರಿಹಾರದಡಿಯಲ್ಲಿ 5 ಲಕ್ಷರೂ ಘೋಷಣೆ ಮಾಡಿದ್ದಾರೆ.

 

 

 

ತಣ್ಣೀರುಪಂತ ಗ್ರಾಮದ ದೇಸಿನ್ ಕೊಡಿ ರವಿ ಪೂಜಾರಿ ಅವರ ಮೂರು ವರುಷ 7 ತಿಂಗಳ ಪುಟ್ಟ ಕಂದಮ್ಮ ಆರಾಧ್ಯಳ ಚಿಕಿತ್ಸೆಗಾಗಿ ಇಂದು ಮಂಗಳೂರಿಗೆ ಆಗಮಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪರವರನ್ನು ಶಾಸಕ ಹರೀಶ್ ಪೂಂಜಾರ ಮುಖಾಂತರ ಭೇಟಿಯಾಗಿ, ಮಗುವಿನ ಚಿಕಿತ್ಸೆಗೆ ಸಹಾಯವನ್ನು ಕೇಳಿಕೊಂಡರು. ಮುಖ್ಯ ಮಂತ್ರಿಗಳು ತಕ್ಷಣವೇ ಸ್ಪಂದಿಸಿ 5 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ನೀಡಿದ್ದಾರೆ.ಈ ಮೂಲಕ ಆರಾಧ್ಯಳ ಶ್ರವಣದೋಷಕ್ಕೆ ಪರಿಹಾರ ದೊರೆಯಲಿದೆ.

Also Read  ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು: ಪ್ರತಿಭಾವಂತ ವಿದ್ಯಾರ್ಥಿ ಪೂರ್ಣಾನಂದನಿಗೆ ಅಭಿನಂದನೆ

 

error: Content is protected !!
Scroll to Top