OLX ನಲ್ಲಿ ಆರ್ಮಿ ಅಧಿಕಾರಿಗಳ ಹೆಸರಲ್ಲಿ ವಂಚನೆ ➤ ನಾಲ್ವರು ಆರೋಪಿಗಳು ಸಿಸಿಬಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು . 05: ಆರ್ಮಿ ಆಧಿಕಾರಿಗಳ ಹೆಸರಿನಲ್ಲಿ ಆನ್ ಲೈನ್ ಮೂಲಕ ವಂಚಿಸುತ್ತಿದ್ದ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಾಜೀಬ್ ಖಾನ್, ಸಾಹೀಲ್, ಉಮೇರ್ ಖಾನ್ ಮತ್ತು ಸಾಹೀದ್ ಸೈಬರ್ ಬಂಧಿತ ಆರೋಪಿಗಳು. ಆರೋಪಿಗಳು OLX  ನಲ್ಲಿ ಆರ್ಮಿ ಆಧಿಕಾರಿಗಳ ಹೆಸರಲ್ಲಿ ನಕಲಿ ಜಾಹೀರಾತು ನೀಡುತ್ತಿದ್ದರು. ಜಾಹೀರಾತಿನಲ್ಲಿ ನಾನು ಆರ್ಮಿ ಆಧಿಕಾರಿಯಾಗಿದ್ದು ನನಗೆ ಬೇರೆಡೆಗೆ ವರ್ಗಾವಣೆಯಾಗಿದೆ. ಅದ್ದರಿಂದ ನನ್ನ ಕಾರನ್ನು ಮಾರಾಟ ಮಾಡಬೇಕಿದೆ ಎಂದು OLX  ನಲ್ಲಿ ಜಾಹೀರಾತು ಹಾಕುತ್ತಿದ್ದ.

 

ಆರ್ಮಿ ಆಧಿಕಾರಿಗಳ ಹೆಸರಲ್ಲಿ ನಕಲಿ ಪೋಟೊ, ಐಡಿ ಕಾರ್ಡ್ ಮತ್ತು ಕಾರಿನ ಪೋಟೊ ಅಪ್ಲೋಡ್ ಮಾಡುತ್ತಿದ್ದರು. ಕಾರು ಮಾರಾಟ ಮತ್ತು ವ್ಯಕ್ತಿ ವಿವರಗಳನ್ನು ನೋಡ್ತಿದ್ದ ಗ್ರಾಹಕರು ಕಾರು ಕೊಂಡುಕೊಳ್ಳಲು ಪೋನ್ ಮಾಡಿದಾಗ ಸೈಬರ್ ಕ್ರಿಮಿಗಳು ಅವರನ್ನ ವಂಚಿಸುತ್ತಿದ್ದರೆಂದು ದೂರು ದಾಖಲಾಗಿದೆ.ಈ ಸಂಬಂಧ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂದಿಸಿದ್ದಾರೆ .

Also Read  ಅಡೆಂಜ ಶಾಲೆ: ಯೋಗದಿನಾಚರಣೆ

 

 

 

 

 

error: Content is protected !!
Scroll to Top