ಸುಳ್ಯ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಇಲ್ಲಿನ ಮುಖ್ಯರಸ್ತೆಯ ಗಾಂಧಿನಗರದಲ್ಲಿರುವ ಜೆ.ಜೆ. ಕಾಂಪ್ಲೆಕ್ಸ್‌ನ ಮಹಡಿಯಿಂದ ಯುವಕನೊಬ್ಬ ಕೆಳಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ.

ಮೃತ ಯುವಕನನ್ನು ಕೋಲ್ಚಾರಿನ ಯತೀಶ್ ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಈತ ಈ ಕಟ್ಟಡದಲ್ಲಿ ಬಾಡಿಗೆ ಕೊಟ್ಟಡಿಯಲ್ಲಿದ್ದು, ಘಟನೆಯ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಎನ್ನಲಾಗಿದೆ. ಇದರಿಂದಾಗಿ ಆಯತಪ್ಪಿ ಕೆಳಕ್ಕೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!
Scroll to Top