(ನ್ಯೂಸ್ ಕಡಬ) newskadaba.com ಹಾಸನ, ನ. 04. ಇನ್ಮುಂದೆ ಕಂಡ ಕಂಡಲ್ಲಿ ಪೊಲೀಸರು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದವರಿಂದ ದಂಡ ವಸೂಲಿ ಮಾಡುವಂತಿಲ್ಲ. ಅದರಲ್ಲೂ ಎಎಸ್.ಐ, ಹೆಡ್ ಕಾನ್ ಸ್ಟೇಬಲ್ ಹಾಗೂ ಕಾನ್ ಸ್ಟೇಬಲ್ ದಂಡವಸೂಲಿ ಮಾಡುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ತಿಳಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಎ.ಎಸ್.ಐ ಹಾಗೂ ಹೈವೇ ಪೆಟ್ರೋಲಿಂಗ್ ಮತ್ತು ಇಂಟರ್ ಸೆಪ್ಟರ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ವಸೂಲಿಯ ನೆಪದಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡವುದು ತಿಳಿದು ಬಂದಿದೆ. ಈ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿರುವ ಹಿನ್ನೆಲೆ ತಕ್ಷಣದಿಂದಲೇ ನಿಯಮ ಜಾರಿಗೆ ಬರುವಂತೆ ಸ್ಥಳದಂಡ ವಸೂಲಿಯನ್ನು ಪಿಎಸ್ ಐ ಅವರನ್ನು ಹೊರತು ಪಡಿಸಿ ಎಎಸ್ಐಯವರು ಮಾಡದಂತೆ ಸೂಚಿಸಲಾಗಿದೆ. ಖುದ್ದಾಗಿ ಪಿಎಸ್ ಐ ಅವರೇ ಸ್ಥಳ ದಂಡವನ್ನು ವಸೂಲಿ ಮಾಡುವಂತೆಯೂ ಸೂಚನೆಯನ್ನು ನೀಡಲಾಗಿದೆ.
ಪಿಎಸ್.ಐ ಹುದ್ದೆಗಿಂತ ಕೆಳಸ್ಥಾನದ ಅಧಿಕಾರಿಗೂ ಸ್ಥಳದಂಡ ವಸೂಲಿ ಪುಸ್ತಕವನ್ನು ಕೂಡಾ ನೀಡದಂತೆ ಸೂಚಿಸಲಾಗಿಿಿಿಿ ದೆ. ಮುಂದಿನ ಆದೇಶದವರೆಗೂ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಠಾಣಾಧಿಕಾರಿಗಳಿಗೆ ಹಾಗೂ ವೃತ್ತ ನಿರೀಕ್ಷಕರಿಗೆ ಸೂಚನೆಯನ್ನು ನೀಡಿದ್ದಾರೆ.