ಜೇಸಿಐ ಕಡಬ ಕದಂಬ ► ಜೇಸಿ ಸಪ್ತಾಹ – 2017 ‘ಕದಂಬೋತ್ಸವ’ಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.01. ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ – 2017 ‘ಕದಂಬೋತ್ಸವ’ ದ ಉದ್ಘಾಟನೆಯು ಕಡಬ ಸೌರಭ ಟವರ್ಸ್ ನ ಎರಡನೇ ಮಹಡಿಯ ಜೇಸಿ ಕಛೇರಿಯಲ್ಲಿ ನಡೆಯಿತು.

ಜೇಸಿಐ ಭಾರತದ ವಲಯ 15 ರ ಪ್ರಾಂತ್ಯ ‘ಇ’ಯ ಉಪಾಧ್ಯಕ್ಷರಾದ ಜೇಸಿ ಮೋಹನ್ ಎ. ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಜೇಸಿಐ ಕಡಬ ಕದಂಬ ಘಟಕವು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪರಿಸರದಲ್ಲಿ ಹೆಸರುವಾಸಿಯಾಗಿದೆ. ಸಾಮಾಜಿಕ ಕಳಕಳಿಯೊಂದಿಗೆ ಜೇಸಿ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಸ್‌. ಬಾಲಕೃಷ್ಣ ಕೊಯಿಲ ಭಾಗವಹಿಸಿ ಮಾತನಾಡಿ, ಯುವ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಜೇಸಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಜೇಸಿಐ ಕಡಬ ಕದಂಬ ಘಟಕವು ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

Also Read  ಎಡಮಂಗಲ: ದಲಿತ ಮಹಿಳೆಯ ಮನೆ ಧ್ವಂಸ ಪ್ರಕರಣ ➤ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ತಸ್ಲೀಂ ಮರ್ಧಾಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷರಾದ ಜಯರಾಂ ಆರ್ತಿಲ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷರಾದ ನಾಗರಾಜ್ ಎನ್.ಕೆ., ಸಪ್ತಾಹ ನಿರ್ದೇಶಕರಾದ ವೆಂಕಟೇಶ್ ಪಾಡ್ಲ, ಘಟಕದ ಕಾರ್ಯದರ್ಶಿ ದಿವಾಕರ ಎಂ‌. ಉಪಸ್ಥಿತರಿದ್ದರು. ಸಪ್ತಾಹದ ಮೊದಲ ದಿನ ಪಾಸ್‌ಪೋರ್ಟ್ ಮೇಳ ನಡೆಯಿತು.

error: Content is protected !!
Scroll to Top