ಉಬರಡ್ಕ: ರಾಶಿ ಹಾಕಿದ ಕಸವನ್ನು ಪುನಃ ಹೆಕ್ಕಿಸಿ ವಾಪಸ್ ಹಿಂತಿರುಗಿಸಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಸುಳ್ಯ, ನ. 03. ಪಿಕಪ್ ವಾಹನದಲ್ಲಿ ಕೆಲವರು ಕಸವನ್ನು ತುಂಬಿಸಿಕೊಂಡು ಬಂದು ಅದನ್ನು ಉಬರಡ್ಕದ ಪೂಮಲೆ ರಕ್ಷಿತಾರಣ್ಯದ ರಸ್ತೆ ಬದಿಯಲ್ಲಿ ಎಸೆಯುತ್ತಿದ್ದುದನ್ನು ಗಮನಿಸಿದ ಊರವರು ಪಿಕಪ್ ನವರನ್ನು ವಿಚಾರಿಸಿ ಎಚ್ಚರಿಕೆಯ ಕರೆ ನೀಡಿ ರಸ್ತೆ ಬದಿ ಹಾಕಿದ್ದ ಕಸವನ್ನು ಹೆಕ್ಕಿಸಿ ಹಿಂತಿರುಗಿಸಿ ಕಳುಹಿಸಿದ ಘಟನೆ ನಡೆದಿದೆ.

 

ಈ ಪಿಕಪ್ ವಾಹನವು ಅಸ್ಮಾಸ್ ಕನ್ ಸ್ಟ್ರಕ್ಷನ್ ಪ್ರೈವೇಟ್ (ಲಿ.)ಸೇರಿದ್ದಾಗಿದ್ದು, ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಬಳಿಯ ಪೂಮಲೆ ರಕ್ಷಿತಾರಣ್ಯದ ರಸ್ತೆ ಬದಿಯಲ್ಲಿ ಸುಳ್ಯದಿಂದ ತ್ಯಾಜ್ಯಗಳನ್ನು ತಂದು ಹಾಕುವುದನ್ನು ಕಂಡು ಸ್ಥಳೀಯರು ಪುನಃ ಹೆಕ್ಕಿಸಿ ತೆಗೆದುಕೊಂಡು ಹೋಗುವಂತೆ ಮಾಡಿದರು. ಇದಕ್ಕೆ ಸಬಂಧಿಸಿದಂತೆ ಗ್ರಾಮ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Also Read  ರಾಜ್ಯದಲ್ಲಿ ಇಂದು 187 ಹೊಸ ಕೊರೋನ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆ

 

 

error: Content is protected !!
Scroll to Top