ಟೆಸ್ಟ್‌ ಡ್ರೈವ್‌ ನೆಪದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್‌ನೊಂದಿಗೆ ಎಸ್ಕೇಪ್

(ನ್ಯೂಸ್ ಕಡಬ) newskadaba.com ಮಣಿಪಾಲ . 03: ಸೆಕೆಂಡ್ ಹ್ಯಾಂಡ್ ಶಾಪ್ ನಿಂದ ವ್ಯಕ್ತಿಯೊಬ್ಬ ಟೆಸ್ಟ್ ರೈಡ್ ಗಾಗಿ ತೆಗೆದುಕೊಂಡು ಹೋದ ಬೈಕ್‍ನೊಂದಿಗೆ ಪರಾರಿಯಾಗಿರುವ ಘಟನೆ ಮಣಿಪಾಲದ ಲಕ್ಷ್ಮಿಂದ್ರ ನಗರದಲ್ಲಿರುವ ನ್ಯೂ ಮಣಿಪಾಲ್ ಬಜಾರ್ ಬೈಕ್ ಶಾಪ್‍ನಲ್ಲಿ ನಡೆದಿದೆ.

ಹೆರ್ಗ ತ್ರಿಶಂಕು ನಗರದ ಪ್ರಶಾಂತ್ ಕುಮಾರ್ ಎಂಬುವರು ವಾಹನ ಸೇಲ್ ಮತ್ತು ಖರೀದಿ ವ್ಯವಹಾರವನ್ನು ಮಾಡಿಕೊಂಡಿದ್ದ ನ್ಯೂ ಮಣಿಪಾಲ್ ಬಜಾರ್ ಶಾಪ್ ಗೆ ಅ.31 ರಂದು ಮಧ್ಯಾಹ್ನ ವೇಳೆ ಗಣೇಶ್ ಉದ್ಯಾವರ ಎಂಬ ಹೆಸರು ಹೇಳಿಕೊಂಡು ಬಂದ ವ್ಯಕ್ತಿ, ಹಳೆಯ ದ್ವಿಚಕ್ರ ವಾಹನ ಬೇಕೆಂದು ಕೇಳಿದ್ದನು. ಅದರಂತೆ ಪ್ರಶಾಂತ್ ಕುಮಾರ್, ಆತನಿಗೆ ಪಾವಂಜೆಯ ನಾಸಿರ್ ಹುಸೈನ್ ಎಂಬುವರು ಮಾರಾಟ ಮಾಡಲು ನೀಡಿದ್ದ ಟಿವಿಎಸ್ ವಿಕ್ಟರ್ ಬೈಕ್ ನ್ನು ರೈಡ್‍ಗೆ ನೀಡಿದ್ದರು. ಒಂದು ರೌಂಡ್ ಹೋಗಿ ಬರ್ತಿನಿ ಎಂದು ಅಕ್ಟೋಬರ್ 31 ರಂದು ಹೋದ ವ್ಯಕ್ತಿ ಈವರೆಗೂ ಪತ್ತೆಯಾಗಿಲ್ಲ. ಗ್ರಾಹಕರ ಸೋಗಿನಲ್ಲಿ ಬಂದ ಗಣೇಶ್ ಉದ್ಯಾಔರ ಬೈಕ್ ನ್ನು ವಾಪಾಸ್ ನೀಡದ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪೇರಡ್ಕ: ಹಸುವಿನ ಮೇಲೆ ಹರಿದ ಕಾರು ► ಮೇಯುತ್ತಿದ್ದ ಹಸು ಸ್ಥಳದಲ್ಲೇ ಮೃತ್ಯು

 

 

 

error: Content is protected !!
Scroll to Top