ಮೈಸೂರು: 25 ಕೆ.ಜಿ ಆನೆದಂತ ವಶ ➤ ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮೈಸೂರು, . 03. 25 ಕೆ.ಜಿ ತೂಕದ ಆನೆದಂತಗಳನ್ನು ಕದ್ದೊಯ್ಯುತ್ತಿದ್ದ ಆರೋಪಿಗಳನ್ನು ಅರಣ್ಯ ಸಂಚಾರ ಅಧಿಕಾರಿಗಳು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

 

 

 

ಬಂಧಿತ ಆರೋಪಿಗಳನ್ನು ತಿರುವನಂತಪುರದ ಪ್ರೆಸ್ಟಿನ್ ಸೆಲ್ವ ಹಾಗೂ ಜಯಪ್ರಕಾಶ್‌, ಉದಯಗಿರಿ ನಿವಾಸಿಗಳಾದ ಮೋಹನ್ ಮತ್ತು ರಮೇಶ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ  ಇವರಿಂದ 25 ಕೆ.ಜಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇವರು ಬನ್ನಿಮಂಪಟದ ಕೆಳಸೇತುವೆಯ ಬಳಿ ಆನೆಯ 4 ದಂತಗಳನ್ನು 8 ಭಾಗಗಳನ್ನಾಗಿ ಮಾಡಿ ಮಾರಾಟ ಮಾಡಲೆತ್ನಿಸುತ್ತಿದ್ದ ವೇಳೆ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇವರು ಒಂದು ಕೆ.ಜಿ ಆನೆದಂತಕ್ಕೆ 20 ಸಾವಿರದಂತೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Also Read  ಸಾರ್ವಜನಿಕ ಆಕ್ಷೇಪಣೆ ಆಹ್ವಾನ

 

 

error: Content is protected !!
Scroll to Top