ಪುತ್ತೂರು: ಭೀಕರ ರಸ್ತೆ ಅಪಘಾತ ➤ 9 ವರ್ಷದ ಬಾಲಕಿ ಮೃತ್ಯು



(ನ್ಯೂಸ್ ಕಡಬ) newskadaba.com ಪುತ್ತೂರು, . 02. ಇಂದು ದರ್ಬೆ ಬೈಪಾಸ್‍ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಒಂಬತ್ತು ವರ್ಷದ ಮಗು ಮೃತಪಟ್ಟಿದೆ. ಮೃತಪಟ್ಟ ಮಗುವನ್ನು ಸ್ವಾತಿ(9 ವ.) ಎಂದು ಗುರುತಿಸಲಾಗಿದೆ.





 

 

 

ಮಂಗಳೂರಿನಿಂದ ಜಾಲ್ಸೂರಿಗೆ ಚಲಿಸಿತ್ತಿದ್ದ ಸ್ವಿಫ್ಟ್ ಕಾರು ದರ್ಬೆ ಬೈಪಾಸಿನ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ಪಾದಚಾರಿಗಳಿಗೆ ಢಿಕ್ಕಿ ಹೊಡೆದಿರುವ ಸ್ವಿಫ್ಟ್ ಕಾರು ಮುಂಭಾಗದಲ್ಲಿ ನಿಂತಿದ್ದ ಎಕ್ಸ್ ಕ್ರಾಸ್ ಕಾರಿಗೆ ಢಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮೂವರು ಪಾದಾಚಾರಿಗಳು ಗಂಭೀರ ಗಾಯಾಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೇ ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮಗು ಮೃತಪಟ್ಟಿದೆ. ಇನ್ನೊರ್ವ ಬಾಲಕಿ ಅನನ್ಯ ಮತ್ತು ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.






 

 

error: Content is protected !!
Scroll to Top