ಸುಳ್ಯ: ಆಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com  ಕಲ್ಲುಗುಂಡಿ,. 02. ವೃದ್ಧರೋರ್ವರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ದಿನ ನಡೆದಿದೆ. ಮೃತರನ್ನು ಕಲ್ಲುಗುಂಡಿ ಮೇಲಿನ ಮನೆ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಮ್ಮದ್ (80) ಎಂದು ಗುರುತಿಸಲಾಗಿದೆ.

 

 

ಡಿ.31 ರಂದು ರಾತ್ರಿ ಅಸ್ವಸ್ಥರಾದಾಗ ಅವರ ಪುತ್ರಿ ಜೈನಾಬಿ ಅವರು ಸ್ಥಳೀಯರ ಸಹಕಾರದಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು, ಪರೀಕ್ಷೆ ನಡೆಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.  ಆದರೆ ಕಳೆದ ದಿನ ಅವರ ಪುತ್ರಿ ರಾಬಿಯಾ ಅವರು ತಂದೆಯ ಮೈ ಮೇಲೆ ಅಲ್ಲಲ್ಲಿ ಬೆಂದ ಸ್ಥಿತಿಯ ಕಲೆ ಇದ್ದುದನ್ನು ಗಮನಿಸಿ, ಸಂಶಯಗೊಂಡು ಪೊಲೀಸರಿಗೆ ವಿಷಯ ತಿಳಿಸಿ, ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಮರು ಪರೀಕ್ಷೆಗೆ ಒಳಪಡಿಸಿದಾಗ ಬಡ್ಡ ಮಹಮ್ಮದ್ ರವರು ಆಸಿಡ್ ಸೇವಿಸಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪುತ್ರ ರಫೀಕ್, ಪುತ್ರಿ ರಾಬಿಯಾ, ಜೈನಾಬಿ ಹಾಗೂ ಕುಟುಂಸ್ಥರನ್ನು ಅಗಲಿದ್ದಾರೆ.

Also Read  ಕಾರ್ಕಳ: ಕಂಠಸಿರಿಯಲ್ಲಿ ಕೊರಗಜ್ಜನ ಹಾಡು ಹಾಡಿ ಸೂಪರ್ ಹಿಟ್ ಆದ ಪುಟ್ಟ ಬಾಲಕ

 

 

error: Content is protected !!
Scroll to Top