ವಿಡಿಯೋ ಮೂಲಕ ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ತಿಳಿಸಿದ ಆರ್‌ಸಿಬಿ ತಂಡ

(ನ್ಯೂಸ್ ಕಡಬ) newskadaba.com ದೆಹಲಿ ನ. 01: ಕನ್ನಡ ರಾಜ್ಯೋತ್ಸವಕ್ಕೆ ವಿವಿಧ ಗಣ್ಯರು ಶುಭ ಕೋರುತ್ತಿದ್ದಾರೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಶುಭಾಶಯ ತಿಳಿಸಿದ್ದು, ತಂಡದ ಆಟಗಾರರು ಮಾತನಾಡಿ, ಸಂತಸ ವ್ಯಕ್ತಪಡಿಸಿದ್ದರೆ.

ಆರ್‌ಸಿಬಿ ಟ್ವಿಟ್ಟರ್ ನ ಅಧಿಕೃತ ಖಾತೆಯ ಮೂಲಕ ವಿಡಿಯೋ ಟ್ವೀಟ್ ಮಾಡಿದ್ದು, ಈ ವಿಶೇಷ ವಿಡಿಯೋದಲ್ಲಿ ಮಾತನಾಡಿ ಶುಭ ಕೋರಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಸೇರಿದಂತೆ ದೇಶೀಯ ಆಟಗಾರರು ಕನ್ನಡದಲ್ಲೇ ಶುಭಾಶಯ ತಿಳಿಸಿದರೆ, ಎಬಿ ಡಿವಿಲಿಯರ್ಸ್ ಸೇರಿದಂತೆ ವಿದೇಶಿ ಆಟಗಾರರು ಇಂಗ್ಲಿಷ್‍ನಲ್ಲಿ ಶುಭ ಕೋರಿದ್ದಾರೆ. ಈ ವಿಶೇಷ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Also Read  ನೂಜಿಬಾಳ್ತಿಲ: ಉಚಿತ ಆಯುಷ್ಮಾನ್ ನೋಂದಣಿ ಅಭಿಯಾನ

 

 

 

error: Content is protected !!
Scroll to Top