ಮೆಕ್ಕಾ ಮಸೀದಿಯ ಒಳಗೆ ನುಗ್ಗಿದ ಕಾರು

(ನ್ಯೂಸ್ ಕಡಬ) newskadaba.com ಸೌದಿ ನ. 01 : ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಮಸೀದಿಗೆ ಕಾರೊಂದು ನುಗ್ಗಿದ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರು ಚಾಲಕನನ್ನ ಬಂಧಿಸಿದ್ದಾರೆ. ಯಾರಿಗೂ ಏನೂ ಆಗದಿದ್ದರೂ ಸಾರ್ವಜನಿಕ ಸುರಕ್ಷತಾ ನಿಯಮದಡಿ ಚಾಲಕನನ್ನ ಬಂಧಿಸಲಾಗಿದೆ ಅಂತಾ ಮೆಕ್ಕಾ ರಿಜಿನಲ್ ಟ್ವೀಟ್ ಮಾಡಿದೆ.

 

 

ಸೌದಿ ಪ್ರೆಸ್ ಏಜೆನ್ಸಿಯ ಪ್ರಕಾರ, ಗ್ರ್ಯಾಂಡ್ ಮಸೀದಿಯ ದಕ್ಷಿಣ ಚೌಕವನ್ನು ಸುತ್ತುವರೆದಿರುವ ರಸ್ತೆಯೊಂದರಲ್ಲಿ ಚಲಿಸುತ್ತಿದ್ದ ಕಾರು ಗುದ್ದಿದೆ. ಅವಘಡಕ್ಕೆ ವೇಗವಾಗಿ ಚಲಾಯಿಸಿರೋದೇ ಕಾರಣ ಅಂತಾ ಹೇಳಲಾಗುತ್ತಿದೆ ಎಂದು ವರದಿ ಮಾಡಿದೆ. ಸೋಶಿಯಲ್ ವಿಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಕಾರು ಮಸೀದಿಯ ಹೊರಗಿನ ಭಾಗಕ್ಕೆ ಗುದ್ದುವುದನ್ನ ನೋಡಬಹುದು. ನಂತರ ಕಾರನ್ನ ಪೊಲೀಸರು ಸುತ್ತುವರಿದು ಸೀಜ್ ಮಾಡುತ್ತಾರೆ.

Also Read  ಪರೀಕ್ಷೆಯಲ್ಲಿ ತಪ್ಪಾಗಿ ಬರೆದ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ

 

 

error: Content is protected !!
Scroll to Top