ನಿರ್ಮಾಪಕ ದಿನೇಶ್ ಗಾಂಧಿ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು . 31: ನಿರ್ಮಾಪಕ ದಿನೇಶ್ ಗಾಂಧಿ ಇಂದು ಮುಂಜಾನೆ ಹೃದಯಾಘಾತದಿಂದ ಅಸುನೀಗಿದ್ದಾರೆ. 52 ವರ್ಷದ ನಿರ್ಮಾಪಕ ಹಾಗೂ ನಿರ್ದೇಶಕ ಪತ್ನಿ ಪುತ್ರರನ್ನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದೀಪ್ ಅಭಿನಯದ ವೀರ ಮದಕರಿ , ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ ಹಾಗೂ ಹೂ ಚಿತ್ರವನ್ನು ನಿರ್ಮಿಸಿದ ಈ ನಿರ್ಮಾಪಕ , ನಟ ಸಿದ್ಧಾಂತ ಅಭಿನಯದ ಛತ್ರಪತಿ ಚಿತ್ರವನ್ನ ನಿರ್ದೇಶನ ಮಾಡಿದ್ದು , ಈಗ ಮತ್ತೊಂದು ಮಕ್ಕಳ ಚಿತ್ರ ನಿರ್ದೇಶನ ಮಾಡಲು ಕೂಡ ಸಿದ್ಧವಾಗಿದ್ದರು.ಇವರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದರು. ಇವರ ಸಾವಿಗೆ ನಟ , ನಟಿಯರು , ತಂತ್ರಜ್ಞರು ಹಾಗೂ ಚಿತ್ರೋದ್ಯಮ ಗಣ್ಯರು ಕಂಬನಿ ಮಿಡಿದಿದ್ದಾರೆ.

Also Read  ಕಡಬ: ನಿವೃತ್ತ ಸೈನಿಕ ಮಲಗಿದ ಸ್ಥಿತಿಯಲ್ಲೇ ಮೃತ್ಯು.!

 

 

error: Content is protected !!
Scroll to Top