(ನ್ಯೂಸ್ ಕಡಬ) newskadaba.com ಕಾಪು ಅ. 31: ತ್ಯಾಜ್ಯ ಶೇಖರಣೆಯಲ್ಲಿ ಸಿಕ್ಕಿದ ಚಿನ್ನದ ಬ್ರಾಸ್‍ಲೈಟನ್ನು ವಾರೀಸುದಾರರಿಗೆ ಹಿಂತಿರುಗಿಸಿ ಪೌರ ಕಾರ್ಮಿಕರು ಮಾನವೀಯತೆ ಮೆರೆದಿದ್ದಾರೆ ಕಾಪು ಪುರಸಭೆಯ ಕಸ ವಿಲೇವರಿಯ ಪೌರಕಾರ್ಮಿಕರು ಮಲ್ಲಾರು ಕೊಪ್ಪಲಂಗಡಿ ಅನಸೂಯ ಎನ್ ಕ್ಲೇವ್‍ನಲ್ಲಿ ಕಸದ ಜತೆ ಕಳೆದು 16 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್‍ನ್ನು ಪತ್ತೆಯಾಯಿತು.
ಬಳಿಕ ಇದು ರೋಲ್ಡ್ ಗೋಲ್ಡ್ ಆಗಿರಬಹುದು ಎಂದು ಕಸದಲ್ಲಿ ತುಂಬಿಸಿದರು. ಆದರೆ ಕಸ ವಿಲೇವರಿ ಘಟಕದಲ್ಲಿ ಪರೀಕ್ಷಿಸಿದಾಗ ಇದು ಚಿನ್ನ ಎಂಬುವುದು ತಿಳಿಯಿತು. ಬಳಿಕ ಅದೇ ಕಟ್ಟಡಕ್ಕೆ ಬಂದು ವಾರೀಸುದಾರರನ್ನು ಪತ್ತೆ ಮಾಡಿ ಬ್ರಾಸ್ ಲೈಟ್ ವಾರಸುದಾರ ಮುಹಮ್ಮದ್ ಸಫ್ವಾನ್ ಅವರಿಗೆ ವಾಪಾಸು ನೀಡಿದರು. ಪೌರಕಾರ್ಮಿಕರಾದ ಚಾಲಕ ಸುಧೀರ್ ಸುವರ್ಣ, ವಿಜಯ್, ಸುನೀಲ್ ಅವರ ಈ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಅಲ್ಲದೆ ವಾರಸುದಾರರು ನಗದು ಪುರಸ್ಕಾರ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.