ಮಾಜಿ ಪ್ರಧಾನಿ ಇಂದಿರಾ ಗಾಂಧಿ 36ನೇ ಪುಣ್ಯತಿಥಿ ➤ ಪ್ರಿಯಾಂಕ ಗಾಂಧಿ, ರಾಹುಲ್‌ ಗಾಂಧಿ ಸ್ಮರಣೆ

(ನ್ಯೂಸ್ ಕಡಬ) newskadaba.com ವಿಟ್ಲ . 31: ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 36ನೇ ಪುಣ್ಯ ತಿಥಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಇಂದಿರಾ ಅವರನ್ನು ಸ್ಮರಿಸಿದ್ದಾರೆ.

 

 

1984ರ ಅಕ್ಟೋಬರ್‌ 31ರಂದು ತಮ್ಮ ಅಂಗ ರಕ್ಷಕರಿಂದಲೇ ಇಂದಿರಾ ಅವರು ಹತ್ಯೆಯಾಗಿದ್ದರು. ‘ಸುಳ್ಳಿನಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಸಾವಿನಿಂದ ಬದುಕಿನೆಡೆಗೆ..ಈ ಮಾತುಗಳ ಪ್ರಕಾರ ಬದುಕುವುದರ ಅರ್ಥವನ್ನು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ದಾದಿ (ಅಜ್ಜಿ)’ ಎಂದು ರಾಹುಲ್‌ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ. ಇಂದಿರಾ ಅವರ ನಗುಮುಖದ ಕಪ್ಪು ಬಿಳುಪಿನ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

Also Read  ಪೌರತ್ವ ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಿದ ಕೇರಳ

 

 

error: Content is protected !!
Scroll to Top