ರಾಷ್ಟ್ರೀಯ ಏಕತಾ ದಿವಸ ➤ ಸರ್ದಾರ್​ ಪಟೇಲರ ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಪ್ರಧಾನಿ

(ನ್ಯೂಸ್ ಕಡಬ) newskadaba.com ಕೆವಾಡಿಯಾ . 31: ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿದ್ದಾರೆ. ಪ್ರವಾಸದ ಎರಡನೇ ಹಾಗೂ ಕೊನೆಯ ದಿನವಾದ ಇಂದು (ಅ.31) ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಹಿನ್ನೆಲೆಯಲ್ಲಿ ಕೆವಾಡಿಯಾದಲ್ಲಿರುವ ಸರ್ದಾರ್​ ಪಟೇಲರ ಏಕತಾ ಪ್ರತಿಮೆಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದರು.

 

 

 

ಬಳಿಕ ಪ್ರಧಾನಿ ಮೋದಿ ಅವರು ಕೇಂದ್ರ ಸಶಸ್ತ್ರ ಪಡೆ ಹಾಗೂ ಗುಜರಾತ್ ಪೊಲೀಸ್ ಪರೇಡ್ ವಿಕ್ಷೀಸಿದ್ದಾರೆ.ಇಂದು ಕೂಡ ದೇಶದ ಮೊದಲ ಸೀ ಪ್ಲೇನ್ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

Also Read  ಮಗನ ಕಾಲೇಜು ಶುಲ್ಕದ ಆಸೆಗಾಗಿ ಪ್ರಾಣಬಿಟ್ಟ ತಾಯಿ !

 

 

error: Content is protected !!
Scroll to Top